ರಾಯಚೂರಿನ ಕನ್ನಡ ಭವನದಲ್ಲಿ ನವಯಾನ ಬೌದ್ಧ ಧಮ್ಮ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಬೌದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ನ್ಯಾಯವಾದಿ ಎಂ.ಮಾರೆಪ್ಪ ಉದ್ಘಾಟಿಸಿದರು. ಸಾಹಿತಿ ವೀರಹನುಮಾನ, ಮುಖಂಡರಾದ ಜೆ.ಬಿ.ರಾಜು, ಶ್ರೀನಿವಾಸ ಕಲವಲದೊಡ್ಡಿ, ಎಂ.ಈರಣ್ಣ, ಆಂಜಿನಿಯ್ಯ ಕುರುಬದೊಡ್ಡಿ, ಹೇಮರಾಜ ಅಸ್ಕಿಹಾಳ, ಹನುಮಂತಪ್ಪ ಮನ್ನಾಪುರ, ಉರುಕುಂದಪ್ಪ ಇದ್ದರು. 
ಜಿಲ್ಲೆ

ಕೋಮು ದ್ವೇಷಕ್ಕೆ ಬೌದ್ಧ ಧರ್ಮಮಾತ್ರ ಉತ್ತರ

ರಾಚಯ್ಯ ಸ್ವಾಮಿ

ರಾಯಚೂರು: ದೇಶ ಇಂದು ಎದುರಿಸುತ್ತಿರುವ ಜಾತಿಯತೆ, ಕೋಮು ದ್ವೇಷ ನಿವಾರಣೆಗೆ ಬೌದ್ಧ ಧರ್ಮ ಮಾತ್ರ ಉತ್ತರವಾಗಿದ್ದು, ಬೌದ್ಧ ಧರ್ಮದಿಂದ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯವಿದೆ ಎಂದು ನ್ಯಾಯವಾದಿ ಎಂ.ಮಾರೆಪ್ಪ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ನವಯಾನ ಬೌದ್ಧ ಧಮ್ಮ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಬೌದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿಯೇ ಹುಟ್ಟಿ ಇತರೆ ದೇಶಗಳಲ್ಲಿ ನೆಲೆನಿಂತು ಶಾಂತಿ ಸಮಾನತೆ ಸಾರುತ್ತಿರುವುದು ಬೌದ್ಧ ಧರ್ಮವಾಗಿದೆ ಎಂದರು.
ಮೊದಲು ಹಿಂದುಗಳ ಐಕ್ಯತೆ ಸಾರುತ್ತಾ ಬಂದು ಇಂದು ನೇರವಾಗಿ ಮನುವಾದ, ಚಾತುರ್ವಣ, ಸನಾತನ ಧರ್ಮ ಸ್ಥಾಪನೆ ಮಾಡುತ್ತಿದೆ. ಆರ್‌ಎಸ್‌ಎಸ್‌ನ ಸಾಂಸ್ಕೃತಿಕ ರಾಜಕಾರಣದ ಜಾತಿ, ಕೋಮು ವಿಷಮತೆಗೆ ಬೌದ್ಧ ಧರ್ಮ ತಕ್ಕ ಉತ್ತರ ನೀಡಬಲ್ಲದು ಎಂದು ಹೇಳೀದರು.
ಕಾರ್ಯಕ್ರಮದಲ್ಲಿ ಸಾಹಿತಿ ವೀರಹನುಮಾನ, ಮುಖಂಡರಾದ ಜೆ.ಬಿ.ರಾಜು, ಶ್ರೀನಿವಾಸ ಕಲವಲದೊಡ್ಡಿ, ಎಂ.ಈರಣ್ಣ, ಆಂಜಿನಿಯ್ಯ ಕುರುಬದೊಡ್ಡಿ, ಹೇಮರಾಜ ಅಸ್ಕಿಹಾಳ, ಹನುಮಂತಪ್ಪ ಮನ್ನಾಪುರ, ಉರುಕುಂದಪ್ಪ, ಅಬ್ರಹಾಂ, ಎನ್.ಬಿ.ಲಕ್ಷ್ಮಿರೆಡ್ಡಿ, ಉರುಕುಂದಪ್ಪ ಉಪಸ್ಥಿತರಿದ್ದರು.