ಪಟ್ಟಣದ ತಾಲೂಕು ಮಿನಿ ವಿಧಾನಸೌಧ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿದರು. 
ಜಿಲ್ಲೆ

ಲೋಕಕ್ಕೆ ಶಾಂತಿ ಬೋಧಿಸಿದ ಬುದ್ಧ

ಲೋಕೇಶ್ ಮನು. ಡಿ

ಆಲೂರು: ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವ ಬೋಧಿಸಿದ ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ತಾಲೂಕು ಮಿನಿ ವಿಧಾನಸೌಧ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತನ್ನ ಎಳೆಯ ವಯಸ್ಸಿನಲ್ಲೇ ಎಲ್ಲವನ್ನೂ ತ್ಯಜಿಸಿ ತಪಸ್ಸನ್ನಾಚರಿಸಿ ಸಮಾಜ, ದೇಶದ ಉದ್ಘಾರ ಆಗಬೇಕು ಎಂಬುದನ್ನು ಜಗತ್ತಿಗೆ ಸಾರಿದವರು. ಇಂತಹ ಮಾಹಾತ್ಮರ ಸ್ಮರಣೆ ಮೂಲಕ ಜಯಂತಿ ಆಚರಣೆ ಮಾಡುವುದು ಮುಂದಿನ ಪೀಳಿಗೆಗೆ ತಿಳಿಯುವ ಉದ್ದೇಶದಿಂದ ಮಾಡಲಾಗುತ್ತದೆ ಎಂದ ಅವರು, ಕಾನೂನು ಬೇರೆ, ತತ್ವಾಚರಣೆ ಬೇರೆ. ಕಾನೂನು ಪಾಲನೆಯಾದರೆ, ತತ್ವಾಚರಣೆ ನಮ್ಮ ಮನಸ್ಸಿನ ವಿಚಾರಕ್ಕೆ ಬಿಟ್ಟದ್ದು. ಈ ನಿಟ್ಟಿನಲ್ಲಿ ಬುದ್ಧ ಜಯಂತಿ ಆಚರಣೆ ಅಚ್ಚಳಿಯದೆ ಉಳಿಯಲಿ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ದೇವನಹಳ್ಳಿ ಬುದ್ಧ ವಿಹಾರ ನ್ಯಾನಲೋಕ ಬಂತೇಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಗುರುಮೂರ್ತಿ, ಬುದ್ಧ ವಿಹಾರದ ಟ್ರಸ್ಟ್ ಸದಸ್ಯ ಶಿವಣ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದೇಶ್, ಶಿಕ್ಷಣ ಇಲಾಖೆ ಗೋವಿಂದೇಗೌಡ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಎ.ಎಂ.ಮಂಜುನಾಥ್ ಇತರರು ಇದ್ದರು.