ಜಿಲ್ಲೆ

ಮೇ.23ರಂದು ನೇರಲಕೆರೆ ಗ್ರಾಮದಲ್ಲಿ ಬುದ್ಧ ಪೂರ್ಣಿಮೆ: ಬುದ್ಧ ಭಾರತ ಫೌಂಡೇಶನ್‌ನ ಅಧ್ಯಕ್ಷ ಜೆ.ರಾಮಯ್ಯ ಮಾಹಿತಿ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದಲ್ಲಿ ಮೇ.23ರಂದು ಬೆಳಗ್ಗೆ 11ಗಂಟೆಗೆ ಭಗವಾನ್ ಗೌತಮ ಬುದ್ಧರ 2568ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುದ್ಧ ಭಾರತ ಫೌಂಡೇಶನ್‌ನ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.

ಮೂಲ ಭಾರತೀಯರಿಗೆ ಬುದ್ಧ ಮತ್ತು ಆತನ ಧಮ್ಮ ಮತ್ತು ಇವರು ಬೋಧಿಸಿದ ಬೋಧನೆಗಳು, ಜೀವನದಲ್ಲಿ ನಡೆದುಕೊಂಡ ನಡೆ-ನುಡಿ ಕುರಿತು ಸರ್ವರಿಗೂ ತಿಳಿ ಹೇಳಬೇಕು. ಸತ್ಯಮಾರ್ಗದಲ್ಲಿ ಪ್ರತಿ ಮಾನವರು ಬಾಳಬೇಕು ಎಂಬ ಉದ್ದೇಶದೊಂದಿಗೆ ಫೌಂಡೇಷನ್ ವತಿಯಿಂದ ಬುದ್ಧ ಪೂರ್ಣಿಮೆ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬುದ್ಧ ಮತ್ತು ಆತನ ಧಮ್ಮ ಕುರಿತು ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಡಾ.ಬಿ.ಆರ್.ಅಂಬೇಡ್ಕರ್ ಬುದ್ಧ ಧಮ್ಮ ಸ್ವೀಕಾರ ಮಾಡಿದ್ದು ಏಕೆ ಎಂಬ ವಿಷಯವಾಗಿ ಅಂಬೇಡ್ಕರ್‌ವಾದಿ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ವಿಚಾರ ಮಂಡನೆ ಮಾಡುತ್ತಾರೆ. ಹಾಗೆಯೇ ಪರಿಶಿಷ್ಟರು ಏಕೆ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡುತ್ತಿಲ್ಲ, ಇದಕ್ಕೆ ಕಾರಣ ಮತ್ತು ಪರಿಹಾರಗಳ ಕುರಿತು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಬಿಎಸ್‌ಐ ಜಿಲ್ಲಾಧ್ಯಕ್ಷ ಅನ್ನದಾನಿ, ತಾಲೂಕು ಅಧ್ಯಕ್ಷ ಬಸವಯ್ಯ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, ವಕೀಲ ಬೂದನೂರು ಬೊಮ್ಮಯ್ಯ, ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ, ಕರುನಾಡ ವೇದಿಕೆಯ ಚಂದ್ರು, ಮುಖಂಡರಾದ ನಿಂಗಪ್ಪ ಹುಳ್ಳೇನಹಳ್ಳಿ, ಪ್ರದೀಪ ಹಾಜರಿದ್ದರು.