ಜಿಲ್ಲೆ

ಬೂದನಗುಡ್ಡಕ್ಕೆ ಪಲ್ಲಕ್ಕಿ ಉತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರ ಗ್ರಾಮದ ಶ್ರೀ ಬೂದನಗುಡ್ಡ ಬಸವಣ್ಣದೇವರ ಜಾತ್ರಾ ಮಹೋತ್ಸವ ಅಂಗವಾಗಿ ಆ. 14ರಂದು ಬೆಳಗ್ಗೆ 10ಕ್ಕೆ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ.

ಪ್ರತಿ ವರ್ಷದಂತೆ ಕೇಶ್ವಾಪುರ ಬಸವಣ್ಣದೇವರ ಗುಡಿಯಿಂದ ಹೊರಡುವ ಪಲ್ಲಕ್ಕಿ ಉತ್ಸವವು ಸ್ಟೇಶನ್ ರೋಡ್, ಹಳೇಹುಬ್ಬಳ್ಳಿ ಮೂಲಕ ಬೂದನಗುಡ್ಡ ತಲುಪಿ ಮಧ್ಯಾಹ್ನ 1ಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಅನ್ನಪ್ರಸಾದ ಜರುಗಲಿದೆ.

ಸಂಜೆ 5ಕ್ಕೆ ಹಳೇಹುಬ್ಬಳ್ಳಿಯಲ್ಲಿರುವ ಕೆಂಚನಗೌಡ್ರ ಮನೆಗೆ ತಲುಪುವ ಪಲ್ಲಕ್ಕಿ ನಂತರ ಕೇಶ್ವಾಪುರ ಬಸವಣ್ಣ ಗುಡಿಗೆ ವಾಪಸ್ ಆಗಲಿದೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.