ಜಿಲ್ಲೆ

ಬೂದನಗುಡ್ಡ ಬಸವಣ್ಣ ಪಲ್ಲಕ್ಕಿ ಮಹೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಶ್ರೀ ಬೂದನಗುಡ್ಡ ಬಸವಣ್ಣದೇವರ ಪಲ್ಲಕ್ಕಿ ಮಹೋತ್ಸವವು ಪ್ರತಿ ವರ್ಷದಂತೆ ಶ್ರಾವಣ ಮಾಸದ ಗುರುವಾರ ಆ. 22ರಂದು ಬೆಳಗ್ಗೆ 10ಕ್ಕೆ ಜರುಗಲಿದೆ.

ಶ್ರೀ ಬಸವಣ್ಣದೇವರು, ಹನುಮಂತದೇವರು, ಗ್ರಾಮದೇವತೆಗಳ ದೇವಸ್ಥಾನ ಟ್ರಸ್ಟ್ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವ ಶ್ರೀ ಬಸವಣ್ಣದೇವರ ಗುಡಿಯಿಂದ ಹೊರಟು ಸ್ಟೇಶನ್ ರೋಡ್, ಹಳೇಹುಬ್ಬಳ್ಳಿ ಮೂಲಕ ಬೂದನಗುಡ್ಡ ತಲುಪಿ, ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದ ಜರುಗಲಿದೆ.

ಭಕ್ತರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಬೇಕೆಂದು ಸಮಿತಿಯ ಬಿ.ಎಚ್. ಬನ್ನಿಕಂಟಿ ಅವರು ಕೋರಿದ್ದಾರೆ.