ಜಿಲ್ಲೆ

ಬಂಡವಾಳ ಆಕರ್ಷಣೆಯಲ್ಲಿ ರಾಜ್ಯದ್ದೇ ಸಿಂಹಪಾಲು

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಕರೊನಾ ಸಂಕಷ್ಟ ಸಂದರ್ಭದಲ್ಲೂ ಕರ್ನಾಟಕ ಹೂಡಿಕೆ ಸ್ವೀಕಾರದಲ್ಲಿ ಅಗ್ರಸ್ಥಾನಿಯಾಗಿದೆ ಎಂಬ ಅಂಶವನ್ನು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ವಿಶ್ವದ ಗಮನ ಸೆಳೆಯಲು ಬೆಂಗಳೂರು ಟೆಕ್ ಸಮಿಟ್‌ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು.

ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾದಂತಹ ಪರಿಸರ ನಿರ್ಮಾಣಕ್ಕೆ ಒತ್ತು ನೀಡಿದೆ. ಇದರ ಪರಿಣಾಮ ಕರೊನಾ ಸಂಕಷ್ಟದ ಸಮಯದಲ್ಲೂ ಕೂಡಾ ರಾಜ್ಯಕ್ಕೆ ಬಂಡವಾಳ ಹರಿದು ಬಂದಿದೆ. 64 ಯೋಜನೆಗಳ ಮೂಲಕ ರಾಜ್ಯದಲ್ಲಿ 1.16 ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆಯಾಗಿದ್ದು, ದೇಶದ ಒಟ್ಟಾರೆ ಶೇ.42ರಷ್ಟು ಬಂಡವಾಳವನ್ನು ರಾಜ್ಯ ಆಕರ್ಷಿಸಿದೆ ಎಂದರು.

ಏಪ್ರಿಲ್‌ನಿಂದ ಜೂನ್ ನಡುವೆ ರಾಜ್ಯ ಅತಿಹೆಚ್ಚು ವಿದೇಶಿ ಬಂಡವಾಳ ವನ್ನು ಆಕರ್ಷಿಸಿದೆ. ಇದು ರಾಜ್ಯ ಸರಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ನೂತನ ಕೈಗಾರಿಕೆಗಳನ್ನು ಸೆಳೆಯುಲು ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ನಿರ್ದಿಷ್ಟ ವಲಯ ನೀತಿಗಳನ್ನು ೋಷಿಸಿರುವ ದೇಶದ ಮೊದಲ ರಾಜ್ಯವಾಗಿದೆ ಎಂದು ಹೇಳಿದರು.