ಜಿಲ್ಲೆ

BSY ವಿರುದ್ಧ ಸೇಡಿನ ಕ್ರಮ,ರಾಜೀನಾಮೆಗೆ 40 ಶಾಸಕರ ಚಿಂತನೆ

ಚಿತ್ರದುರ್ಗ:ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಂಸದ ಗೋವಿಂದ ಎಂ.ಕಾರಜೋಳ ಕಿಡಿಕಾರಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಐಸಿಸಿ ಧುರೀಣ ರಾಹುಲ್‌ಗಾಂಧಿ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದರು ಎಂಬ ಕಾರಣಕ್ಕೆ ಧ್ವೇಷದಿಂದ ಸತ್ತು ಹೋದ ಪ್ರಕರಣಕ್ಕೆ ಈ ಸರ್ಕಾರ ಮರು ಜೀವ ನೀಡಿದೆ. ಇದೊಂದು ಅರ್ಥ ಹೀನ ಕೃತ್ಯ ವೆಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರಿಗೂ ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಸಿದ್ದರಾಮಯ್ಯರನ್ನು ಎಚ್ಚರಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಂಜಲಿ,ನೇಹಾಹಿರೇಮಠ, ರೇಣುಕ ಸ್ವಾಮಿ ಹತ್ಯೆಯಾಗಿದೆ. ರೇಣುಕ ಸ್ವಾಮಿ ಹತ್ಯೆ ಪ್ರಕರಣ ಗಮನಿಸಿದರೆ ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆ. ಪೊಲೀಸರು ಚಲವಲನಗಳ ಮೇಲೆ ನಿಗಾ ಇಡಲು ವಿಫಲರಾಗಿದ್ದಾರೆ.
ಚಿತ್ರದುರ್ಗದ ಶಾಸಕರು ಘಟನೆ ನಡೆದ 24 ತಾಸಿನೊಳಗೆ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳ ಬೇಕಿತ್ತು. ಆದರೆ ಕಾಟಾಚಾರಕ್ಕೆ ಎಂಬಂತೆ ವಾರದ ಬಳಿಕ ನೊಂದವರ ಮನೆಗೆ ಭೇಟಿ ನೀಡಿದ್ದಾರೆ.

ಗೃಹ ಸಚಿವರ ಬಾಲ ಹಿಡಿದು
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಈವರೆಗೂ ಭೇಟಿ ಕೊಟ್ಟಿಲ್ಲ, ಸೋಮವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀ ಡುತ್ತಾರೆಂಬ ಸುದ್ದಿ,ಬಹುಶಃ ಸುಧಾಕರ್ ಅವರ ಬಾಲ ಹಿಡಿದುಕೊಂಡು ರೇಣುಕ ಸ್ವಾಮಿ ಮನೆಗೆ ಹೋಗಲು ಯೋಚಿಸಿರಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜೂ.19ಕ್ಕೆ ನಿಗದಿಯಾಗಿದ್ದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯನ್ನು 24ಕ್ಕೆ ಮುಂದೂಡಲಾಗಿದೆ. ಅಂದುಲೋಕಸಭೆ ಅಧಿವೇಶನ ಶುರ ವಾಗಲಿದ್ದು,ಸಭೆಗೆ ನಾನು ಹಾಜರಾಗಬಾರದೆಂಬ ಕಾರಣಕ್ಕೆ ಸಭೆ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಲೆಕ್ಕಾಚಾರವನ್ನು ಬಿಡಿಸಿಟ್ಟರು.
ಈ ವಿಚಾರದಲ್ಲಿ ಸರ್ಕಾರ ಬುದ್ಧಿವಂತಿಕೆ ಪ್ರದರ್ಶಿಸಿದೆ. ನನ್ನನ್ನ ಹೊರತು ಪಡಿಸಿ ಸಭೆ ಮಾಡ ಬೇಕೆಂಬ ವಿಚಾರವಿದ್ದರೆ ಹಾಗೇ ಆಗಲಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕುಸಿದಿರುವ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸಬೇಕೆಂದ ಅವರು, ಇಂಧನ ದರ ಏರಿಕೆ ಸಮರ್ಥಿಸಿಕೊಳ್ಳುತ್ತಿರುವ ರಾಜ್ಯಸರ್ಕಾರದ ನಡೆಯನ್ನು ಬಂಡತನವೆಂದರು.
ಬಂಡೆದ್ದಿರುವ 40 ಶಾಸಕರು
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಇಂಧನ ದರವನ್ನು ರಾಜ್ಯಸರ್ಕಾರ ಹೆಚ್ಚಿಸಿದ್ದು,ಅನುದಾನ ಸಿಗದಿದ್ದರೆ ಶಾಸಕರಾಗಿದ್ದು ಏನು ಪ್ರ ಯೋಜನವೆಂದು ಮುಧೋಳ ಶಾಸಕ ಅಪ್ಪಾಜಿ ನಾಡಗೌಡ ಪ್ರಶ್ನಿಸಿದ್ದಾರೆ. ರಾಜೀನಾಮೆಗೂ ಸಿದ್ಧವಾಗಿದ್ದರೆ. ಇದೇ ಮಾದರಿ 40 ಶಾಸಕ ರು ಬಂಡೆದಿದ್ದು,ಇವರೆಲ್ಲರೂ ರಾಜೀನಾಮೆಗೆ ಆಲೋಚಿಸುತ್ತಿದ್ದಾರೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರು.

ಎಸ್‌ಸಿ,ಎಸ್‌ಟಿ ಅನುದಾನ ದುರ್ಬಳಕೆ
ಎಸ್‌ಸಿ,ಎಸ್‌ಟಿ ಅನುದಾನ ದುರ್ಬಳಕೆ ಆಗುತ್ತಿದೆ,ಇದನ್ನು ನಿಯಂತ್ರಿಸಬೇಕು. ಈಗಾಗಲೇ ಅನ್ಯ ಉದ್ದೇಶಕ್ಕೆ ಬಳಸಲಾಗಿರುವ 24 ಸಾವಿರ ಕೋಟಿ ರೂ.ಗಳನ್ನು ದಲಿತರಿಗೆ ಭೂಮಿ,ನೀರು,ನೇರ ಸಾಲ ಕೊಡಲು ಬಳಸಬೇಕು.
ನೇರ ಸಾಲ ಮೊತ್ತ ಕಡಿತ ತಮ್ಮ ಅವಧಿಯ ಕ್ರಮವನ್ನು ಸಮರ್ಥಿಸಿಕೊಂಡ ಕಾರಜೋಳ,ಶಾಸಕರು ಕೂಡಲೇ ಸಭೆಗಳನ್ನು ನಡೆಸಿ ಅರ್ಹರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ಹಂಚಬೇಕೆಂದರು.

ಕೇಂದ್ರದೆಡೆ ಬೊಟ್ಟು
ಬಿತ್ತನೆ ಬೀಜ,ಗೊಬ್ಬರದ ಸಮರ್ಪಕ ಪೂರೈಕೆ ಕ್ರಮ ವಹಿಸಬೇಕು. ಪ್ರತಿಯೊಂದಕ್ಕೆ ಕೇಂದ್ರದೆಡೆ ಬೊಟ್ಟು ಮಾಡುವುದನ್ನು ಸರ್ಕಾರ ಕೈ ಬಿಡಬೇಕು. ಬೆಳೆ ನಷ್ಟ ಪರಿಹಾರವಿನ್ನೂ ಬರಿಸಿಲ್ಲ. ಮೊದಲು ರೈತರಿಗೆ ಕೊಟ್ಟು ಅದನ್ನು ಕೇಂದ್ರದಿಂದ ಹಿಂಪಡೆಯಲು ಸಾಧ್ಯವಿತ್ತು ಎಂದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಅಭಿವೃದ್ಧಿ ಕೆಲಸಗಳಾಗಿಲ್ಲ. ಯಡಿಯೂರಪ್ಪ,ಬಸವರಾಜ ಬೊ ಮ್ಮಾಯಿ ಅವಧಿ ಮಂಜೂರಾದ ಕಾಮಗಾರಿಗಳಿಗೂ ವೇಗ ಸಿಕ್ಕಿಲ್ಲ. ಕೇಂದ್ರ ಸಚಿವರಾದ ವಿ.ಸೋಮಣ್ಣ,ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡುವ ಮೂಲಕ ಚಿತ್ರದುರ್ಗ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಹೇಳಿದರು.
ಜೂ.19ರಂದು ಕೇಂದ್ರ ಪುರಸ್ಕೃತ ಯೋಜನೆಗಳ ಯಾವ ಹಂತದಲ್ಲಿವೆ ಎಂಬುದರ ಕುರಿತಂತೆ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂ ದರು.