ಮೈಸೂರು: ಸ್ವಾತಂತ್ರೃ ಹೋರಾಟಗಾರ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲು ಮಂಗಳವಾರ ನಗರಕ್ಕೆ ಆಗಮಿಸಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಆಹಾರವನ್ನು ನೀಡಿದರು.
ಅಂಬಾರಿ ಆನೆ ಅಭಿಮನ್ಯುವಿಗೆ ಆರತಿ ಬೆಳಗೆ ಪೂಜೆ ಸಲ್ಲಿಸಿದ ಯಡಿಯೂರಪ್ಪ ನಂತರ ಕಬ್ಬು ಹಾಗೂ ಬೆಲ್ಲವನ್ನು ನೀಡಿದರು. ಈ ಸಂದರ್ಭ ಅಭಿಮನ್ಯು ಸೊಂಡಿಲನ್ನು ಎತ್ತಿ ಯಡಿಯೂರಪ್ಪ ಅವರನ್ನು ಆಶೀರ್ವದಿಸಿತು. ಈ ಸಂದರ್ಭ ಸಚಿವರಾದ ಎಸ್.ಟಿ. ಸೋಮಶೇಖರ್, ನಾರಾಯಣ ಗೌಡ, ಶಾಸಕ ಎಲ್. ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಡಿಸಿಎಫ್ ಕರಿಕಾಳನ್ ಹಾಗೂ ಇತರರು ಇದ್ದರು.