ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಚಂದ್ರಶೇಖರ್, ಭರತ್‌ಕುಮಾರ್ ಗೌಡ, ಪುರುಷನಾಥ್ ಇದ್ದರು. 
ಜಿಲ್ಲೆ

ಏ.9ರಂದು ಮೈಸೂರಿನಲ್ಲಿ ಬಿಎಸ್‌ಪಿ ಸಮಾವೇಶ

ಅಭಿನಯ್ ಎಚ್.ಎಂ

ನಂಜನಗೂಡು: ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಎಂಟು ಜಿಲ್ಲೆಗಳ ವಲಯ ಮಟ್ಟದ ಬಿಎಸ್‌ಪಿ ಸಮಾವೇಶ ಏ.9ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪಕ್ಷದ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ರಾಜ್ಯ ಉಸ್ತುವಾರಿ ರಾಜಾರಾಮ್ ಹಾಗೂ ಕೇಂದ್ರೀಯ ಉಸ್ತುವಾರಿಗಳು ಪಾಲ್ಗೊಳ್ಳಲಿದ್ದಾರೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ರಾಜ್ಯ ಕಾರ್ಯದರ್ಶಿ ಭರತ್‌ಕುಮಾರ್ ಗೌಡ, ತಾಲೂಕು ಅಧ್ಯಕ್ಷ, ಪುರುಷನಾಥ್, ಜಿಲ್ಲಾ ಕಾರ್ಯದರ್ಶಿ ಮುಳ್ಳೂರು ಸಿದ್ದರಾಜು, ಜಿಲ್ಲಾ ಸಂಯೋಜಕ ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ್, ಮುಖಂಡರಾದ ಯರಗನಹಳ್ಳಿ ಶಿವಣ್ಣ, ಮಹದೇವಸ್ವಾಮಿ, ರಂಗದಾಸಿ, ವರುಣ ಅಧ್ಯಕ್ಷ ಸಿದ್ದೇಶ್ ಇತರರಿದ್ದರು.