ಜಿಲ್ಲೆ

ಬಿಎಸ್​ಎನ್​ಎಲ್ ಪಿಂಚಣಿದಾರರ ಸಂಘದ ಸಭೆ

ಹುಬ್ಬಳ್ಳಿ: ಅಖಿಲ ಭಾರತ ಬಿಎಸ್​ಎನ್​ಎಲ್ ಪಿಂಚಣಿದಾರರ ಸಂಘದ ಧಾರವಾಡ ಜಿಲ್ಲಾ ಘಟಕದ ವಾರ್ಷಿಕ ಸಭೆ ಹಾಗೂ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಗರದ ಮುನ್ಸಿಪಲ್ ಎಂಪ್ಲಾಯೀಸ್ ಹಾಲ್​ನಲ್ಲಿ ನಡೆಯಿತು.

ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಪಿ. ಗಂಗಾಧರರಾವ್ ಹಾಗೂ ವಲಯ ಕಾರ್ಯದರ್ಶಿ ಆರ್. ಚಂಗಪ್ಪ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಮಂಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್.ಕೆ. ಗಂದಿಗವಾಡ, ಎಂ.ಎನ್. ಘೊರ್ಪಡೆ, ಶಿವಾನಂದ, ಎಸ್.ಎಲ್. ಪೂಜಾರ, ಇತರರು ಇದ್ದರು.