ಜಿಲ್ಲೆ

ಗೋಳ್ತಮಜಲು ಬಿಎಸ್‌ಎನ್‌ಎಲ್ ನೋ ನೆಟ್‌ವರ್ಕ್: 6 ದಿನಗಳಿಂದ ಸಂಪರ್ಕ ಇಲ್ಲವೆಂದು ಆಕ್ರೋಶ

ಸೌಮ್ಯ ಆರ್

ಬಂಟ್ವಾಳ: ಗೋಳ್ತಮಜಲು ಬಿಎಸ್‌ಎನ್‌ಎಲ್ ವಿನಿಮಯ ಕೇಂದ್ರದ ವ್ಯಾಪ್ತಿಯಲ್ಲಿ ಆರು ದಿನಗಳಿಂದ ಮೊಬೈಲ್ ನೆಟ್ವರ್ಕ್ ಇಲ್ಲದೆ ಗ್ರಾಹಕರು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಬಿಎಸ್‌ಎನ್‌ಎಲ್ ಕಚೇರಿಗೆ ದೂರು ನೀಡಿದರೂ ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ಬಿಎಸ್‌ಎನ್‌ಎಲ್ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಖಾಸಗಿ ಮೊಬೈಲ್ ಕಂಪನಿಗಳ ಪೈಪೋಟಿಯ ನಡುವೆಯೂ ಸರ್ಕಾರಿ ಸ್ವಾಮ್ಯದ ದೂರವಾಣಿ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಮಂದಿ ಗ್ರಾಹಕರು ಈಗಲೂ ಬಿಎಸ್‌ಎನ್‌ಎಲ್ ದೂರವಾಣಿ ಸೇವೆಯನ್ನು ಅವಲಂಬಿಸಿದ್ದಾರೆ. ಆದರೆ ಬಿಎಸ್‌ಎನ್‌ಎಲ್ ಮಾತ್ರ ಗ್ರಾಹಕರಿಗೆ ಸರಿಯಾದ ಸೇವೆ ನೀಡದೆ, ಸಮಸ್ಯೆಗಳು ಬಂದಾಗ ತಕ್ಷಣ ಪರಿಹರಿಸದೆ ಇರುವುದರಿಂದ ಗ್ರಾಹಕರು ಪರ್ಯಾಯ ದೂರ ಸಂಪರ್ಕ ಸೇವೆಯನ್ನು ಅವಲಂಬಿಸುವ ಬಗ್ಗೆ ಚಿಂತಿಸುತ್ತಿದ್ದಾರೆ.