ಜಿಲ್ಲೆ

ಬಿಎಸ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

Udupi

ಉಡುಪಿ: ನಗರದ ಬೀಡಿನಗುಡ್ಡೆ ಸಮೀಪದ ಖಾಸಗಿ ಹಾಸ್ಟೆಲ್‌ನಲ್ಲಿ ವಾಸವಿದ್ದು ಪದವಿ ಓದುತ್ತಿದ್ದ ತೀರ್ಥಹಳ್ಳಿ ಬಾಳಗಾರು ಸಮೀಪದ ಕೆಸರೆ ಗ್ರಾಮದ ನಿವಾಸಿ ವೀಕ್ಷಿತಾ (20) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಓದುತ್ತಿದ್ದ ಯುವತಿ ಶುಕ್ರವಾರ ರಾತ್ರಿ ಹಾಸ್ಟೆಲ್‌ನ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಯುವತಿ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತೀರ್ಥಹಳ್ಳಿಯ ಕಿರಣ್ ಎಂಬಾತ ತನಗೆ ಮೋಸ ಮಾಡಿದ್ದಾನೆ. ಫೋನ್ ಮಾಡಿ ಕಿರಿಕಿರಿ ಮಾಡುತ್ತಾನೆ. ನನಗೆ ಹಿಂಸೆ ನೀಡುತ್ತಿದ್ದ ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಕಿರಣ್ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ವೀಕ್ಷಿತ ದ್ವಿತೀಯ ಬಿಎಸ್ಸಿಯಲ್ಲಿ ಉತ್ತಮ ಅಂಕ ಪಡೆದಿದ್ದಳು, ಈ ವರ್ಷ ಕಡಿಮೆ ಅಂಕ ಬಂದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಳು. ರೂಮೇಟ್ಸ್‌ನವರು ಶುಕ್ರವಾರ ರಾತ್ರಿ ಪರ್ಯಾಯ ಉತ್ಸವ ನೋಡಲಿಕ್ಕೆ ಕರೆದಿದ್ದಾರೆ. ಆದರೆ ವೀಕ್ಷಿತ ನಾನು ಬರುವುದಿಲ್ಲ ಮತ್ತು ರಾತ್ರಿ ನನ್ನನ್ನು ಎಬ್ಬಿಸಬೇಡಿ ಎಂದು ಹೇಳಿದ್ದಾಗಿ ಕುಟುಂಬ ಮೂಲಗಳು ತಿಳಿಸಿವೆ.