murder 
ಜಿಲ್ಲೆ

ಅನೈತಿಕ ಸಂಬಂಧ ಎಂದು ಹೆಂಡತಿ ಪ್ರಿಯಕರನನ್ನು ಕೊಂದೇ ಬಿಟ್ಟ!

ಚಿಕ್ಕಬಳ್ಳಾಪುರ: ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಅನ್ನೊ ಅನುಮಾನದ ಹಿನ್ನಲೆಯಲ್ಲಿ, ಪತ್ನಿಯ ಪ್ರೀಯಕರನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಬೆಲ್ಲಾವಲಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದ 48 ವರ್ಷದ ಕೃಷಿಕ ವೆಂಕಟೇಶಪ್ಪ ತನ್ನದೆ ಜಮೀನಿನಲ್ಲಿ ಬರ್ಬರವಾಗಿ ಹತ್ಯೆಗಿಡಾಗಿದ್ದಾನೆ. ಚುಂಚಗಾನಹಳ್ಳಿ ಗ್ರಾಮದ ನರಸಿಂಹಪ್ಪ ಕೊಲೆ ಆರೋಪಿಯಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಮಂಚೇನಹಳ್ಳಿ ಠಾಣೆ ಪೊಲೀಸರು, ಹಾಗೂ ಚಿಕ್ಕಬಳ್ಳಾಫುರ ಎಸ್ಪಿ ಮಿಥುನ್ ಕುಮಾರ ಮೃತನ ಸಂಬಂಧಿಗಳಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ, ಪಕ್ಕದ ಚುಂಚಗಾನಹಳ್ಳಿ ಗ್ರಾಮದ ಚಂದ್ರಕಲಾ ಹಾಗೂ ನರಸಿಂಹಪ್ಪ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದರು.

ಪೊಲೀಸರು ಖಚಿತ ಮಾಹಿತಿ ಮೇರೆಗೆ ನರಸಿಂಹನನ್ನು ಬಂಧಿಸಿ ತನಿಖೆ ನಡೆಸಿದ್ರೆ ಆರೋಪಿ ತಾನೆ ಕೃತ್ಯ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಅಸಲಿಗೆ ಆರೋಪಿಯ ಪತ್ನಿಗೂ ಮೃತ ವೆಂಕಟೇಶಪ್ಪಗೂ ಅನೈತಿಕ ಸಂಬಂಧ ಇತ್ತು ಅದಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಮೃತ ವೆಂಕಟೇಶಪ್ಪ ಹಾಗೂ ಆರೋಪಿ ನರಸಿಂಹಪ್ಪನ ಊರು ಅಕ್ಕಪಕ್ಕದಲ್ಲೆ ಇದ್ದು, ನರಸಿಂಹನ ಪತ್ನಿ ಚಂದ್ರಕಲಾ ವೆಂಕಟೇಶಪ್ಪನ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದು ಹೋಗುತ್ತಿದ್ದಳು. ಆಗ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತಂತೆ, ಇದನ್ನು ತಿಳಿದ ಆರೋಪಿ, ಬುದ್ದಿವಾದ ಹೇಳಿದ್ರೆ ಕೆಳದ ಕಾರಣ ವೆಂಕಟೇಶಪ್ಪನ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.