ಇಂಡಿಯಲ್ಲಿ ರೇಣುಕಾ ಕನ್ನೊಳ್ಳಿ ಕೊಲೆಗೆ ಬಳಸಿದ ಮಾರಕಾಸ್ತ್ರ 
ಜಿಲ್ಲೆ

ಭೀಮಾತೀರದಲ್ಲಿ ಭೀಕರ ಹತ್ಯೆ, ಹಾಡಹಗಲೆ ಸರ್ಕಾರಿ ಗುಮಾಸ್ತೆ ಕೊಲೆ

ವಿಜಯಪುರ: ಸರ್ಕಾರಿ ಇಲಾಖೆಯೊಂದರ ಗುಮಾಸ್ತೆಯನ್ನು ಹಾಡಹಗಲೆ ಹತ್ಯೆಗೈಯ್ಯಲಾಗಿದೆ.

ಇಂಡಿ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಸಮಾಜ ಕಲ್ಯಾಣ ಇಲಾಖೆಯ ಗುಮಾಸ್ತೆ ರೇಣುಕಾ ಸಾಯಬಣ್ಣ ಕನ್ನೊಳ್ಳಿ (30) ಹತ್ಯೆಯಾಗಿದ್ದಾಳೆ.

ಮೂಲತಃ ಕೊಟ್ನಾಳದವರಾದ ರೇಣುಕಾ ಬೈಕ್ ಮೇಲೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗೊಂಡಿದ್ದ ರೇಣುಕಾಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಘಟನೆಗೆ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದ್ದು, ಯಾವುದಕ್ಕೂ ತನಿಖೆ ಬಳಿಕವೇ ನಿಜಾಂಶ ತಿಳಿದು ಬರಬೇಕಿದೆ. ಇಂಡಿ ನಗರ ಠಾಣೆ ಪೊಲೀಸರು ಸ್ಥಳಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.