ವಿಜಯವಾಣಿ ಸುದ್ದಿಜಾಲ ಧಾರವಾಡ
ಅವಳಿನಗರ ನಡುವಿನ ಬಿಆರ್‌ಟಿಎಸ್ ಸಮಸ್ಯೆಗಳನ್ನು ಬಗೆಹರಿಸುವ ಸಂಬ0ಧ ಧಾರವಾಡ ಧ್ವನಿ ಪದಾಽಕಾರಿಗಳ ಜಿಲ್ಲಾ ಉಸ್ತುವಾರಿ ಸಚಿವರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಚರ್ಚೆ ನಡೆಸಿದರು.
ಕೆಲವೆಡೆ ಮಿಶ್ರವಾಹನ ಸಂಚಾರಕ್ಕೆ ಅನುಕೂಲ, ಪಾದಚಾರಿಗಳು ಮತ್ತು ಲಘು ವಾಹನಗಳು ದಾಟಲು ಮಾರ್ಗ ನಿರ್ಮಾಣ, ಬಿಆರ್‌ಟಿಎಸ್ ಜಂಕ್ಷನ್‌ಗಳಲ್ಲಿ ಶೌಚಗೃಹ ಮತ್ತು ಕುಡಿಯುವ ನೀರಿನ ಸೌಲಭ್ಯ, ರಸ್ತೆಯಲ್ಲಿ ನೀರು ನಿಲುಗಡೆಯಿಂದ ಆಗುವ ಅಡಚಣೆ, ನವಲೂರ ಮತ್ತು ಉಣಕಲ್ಲ ಬಳಿಯ ಸೇತುವೆಗಳ ದುರಸ್ತಿ, ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ ಬಸ್ ಸೌಲಭ್ಯ ಸೇರಿ ವಿವಿಧ ವಿಷಯಗಳ ಬಗ್ಗೆ ಸಚಿವರು ಚರ್ಚಿಸಿದರು.
ಈಗಿರುವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಒದಗಿಸಲು ಬೇಕಿರುವ ಮಾರ್ಗೋಪಾಯಗಳು, ಅವಶ್ಯಕ ಸೌಲಭ್ಯ, ಆರ್ಥಿಕ ನೆರವು ಮತ್ತು ಸರ್ಕಾರದ ಹಂತದಲ್ಲಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಅಽಕಾರಿಗಳಿಗೆ ಸೂಚಿಸಿದರು. ಸೆ. 6ರಂದು ಹುಬ್ಬಳ್ಳಿಯಿಂದ ಧಾರವಾಡದವರೆಗಿನ ಬಿಆರ್‌ಟಿಎಸ್ ಮಾರ್ಗದಲ್ಲಿ ಸಂಚರಿಸಿ ಸಮಸ್ಯೆಗಳ ವಾಸ್ತವತೆಯನ್ನು ಪರಿಶೀಲಿಸುತ್ತೇನೆ ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಮುಖಂಡರಾದ ದೀಪಕ ಚಿಂಚೋರೆ, ಗುರುರಾಜ ಹುಣಶಿಮರದ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ವೆಂಕಟೇಶ ರಾಯ್ಕರ್, ಸಂತೋಷ ಪಟ್ಟಣಶೆಟ್ಟಿ, ಮಂಜುನಾಥ ಭೋವಿ, ಪುಂಡಲೀಕ ತಳವಾರ, ಸುರೇಖಾ ಪೂಜಾರ, ಬಸವರಾಜ ಪೊಮೋಜಿ, ರಾಜೇಶ ಮನಗುಂಡಿ, ಬಿ.ಎಂ. ಕೇದಾರನಾಥ, ಪುಂಡಲೀಕ ಹಡಪದ, ಇತರರಿದ್ದರು.