ಜಿಲ್ಲೆ

ಕೊನೆಗೂ ಕಣ್ತೆರೆದ ಬಿಆರ್‌ಟಿಎಸ್ ಅಧಿಕಾರಿಗಳು

Gadag - Desk - Tippanna Avadoot

ಧಾರವಾಡ: ಎಲ್ಲವೂ ಸರಿಯಾಗಿದ್ದರೆ, ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದ್ದರೆ, ಅಧಿಕಾರಿಗಳು ಕರ್ತವ್ಯ ದಕ್ಷತೆ ತೋರಿದ್ದರೆ ಹು-ಧಾ ಬಿಆರ್‌ಟಿಎಸ್ ಇಂದು ರಾಜ್ಯದ ಗಮನ ಸೆಳೆಯುತ್ತಿತ್ತು.

ಆದರೆ, ಜನಪ್ರತಿನಿಧಿಗಳ ನಿಷ್ಕಾಳಜಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬಿಆರ್‌ಟಿಎಸ್ ಯೋಜನೆಯನ್ನು ಜನ ತೆಗಳುವಂತಾಗಿದೆ.


ಈ ಕುರಿತು ‘ವಿಜಯವಾಣಿ’ ಪತ್ರಿಕೆ ‘ಚಿಗರಿ- ಅವಾಂತರ ನಿರಂತರ’ ಎಂಬ ಸರಣಿ ವರದಿಗಳನ್ನು ಪ್ರಕಟಿಸಿತ್ತು. ವಿಜಯವಾಣಿಯ ಕಾಳಜಿ ಬಿಆರ್‌ಟಿಎಸ್ ಅಧಿಕಾರಿಗಳ ಕಣ್ತೆರೆಸಿದಂತಿದೆ. ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ನೀರು ನಿಲ್ಲುವುದನ್ನು ತಡೆಯುವುದಕ್ಕಾಗಿ ಮಳೆಗಾಲಕ್ಕೂ ಮೊದಲು ಅಧಿಕಾರಿಗಳು ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ.


ಟಾಸ್ಕ್‌ಫೋರ್ಸ್ ರಚನೆ: ಅವಳಿನಗರದ ನಡುವಿನ ಬಿಆರ್‌ಟಿಎಸ್ ಕಾರಿಡಾರ್‌ಗೆ ಮಳೆ ನೀರು ಹರಿದುಬರುತ್ತಿತ್ತು. ಅದರ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಕಾರಿಡಾರ್‌ಗಳ ಪಕ್ಕದಲ್ಲಿರುವ ಚರಂಡಿಗಳ ಮೂಲಕ ಮಳೆ ನೀರು ಹರಿದು ಹೋಗುವಂತೆ ಗುತ್ತಿಗೆದಾರರಿಂದ ಸ್ವಚ್ಛ ಮಾಡಿಸಲಾಗುತ್ತಿದೆ. ಜೊತೆಗೆ ಈ ಸಮಸ್ಯೆಗಳ ನಿವಾರಣೆ ಮತ್ತು ಸಾರ್ವಜನಿಕರಿಗೆ ಪ್ರಯಾಣದಲ್ಲಿ ತೊಂದರೆಯಾದಾಗ ತಕ್ಷಣ ನಿವಾರಿಸುವ ಸಲುವಾಗಿ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಅವರು ಪ್ರಧಾನ ವ್ಯವಸ್ಥಾಪಕರ ನೇತೃತ್ವದಲ್ಲಿ ಇಂಜಿನಿಯರ್‌ಗಳನ್ನೊಳಗೊಂಡ ವಿಪತ್ತು ನಿರ್ವಹಣಾ ಟಾಸ್‌‌ಕೆೆರ್ಸ್ ಸಮಿತಿ ರಚಿಸಿದ್ದಾರೆ.

ಬಿಆರ್‌ಟಿಎಸ್ ವಿಪತ್ತು ನಿರ್ವಹಣಾ ಟಾಸ್‌‌ಕೆೆರ್ಸ್ ಸಮಿತಿಯು ಪ್ರಯಾಣಿಕರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರಿಗೆ ತೊಂದರೆಯಾದರೆ ಬಿಆರ್‌ಟಿಎಸ್ ಕಂಟ್ರೋಲ್ ರೂಂ ಟೋಲ್‌ಫ್ರೀ ಸಂಖ್ಯೆ 18005991010ಗೆ ಕರೆ ಮಾಡಲು ಸೂಚಿಸಲಾಗಿದೆ. ಅಲ್ಲದೆ, ಸನ್ನಿವೇಶವನ್ನು ವಾಟ್ಸಾ ್ಯಪ್ ನಂ. 9611537436 ಕಳುಹಿಸಲು ಕೋರಲಾಗಿದೆ. ವಿಪತ್ತು ನಿರ್ವಹಣಾ ಟಾಸ್‌‌ಕೆೆರ್ಸ್ ಸಮಿತಿಯು ತಕ್ಷಣ ಸ್ಪಂದಿಸಿ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲಿದೆ. - ಎಸ್. ಭರತ್, ಬಿಆರ್‌ಟಿಎಸ್ ಎಂಡಿ
ಬಿಆರ್‌ಟಿಎಸ್ ಸ್ವತಂತ್ರ ಸಂಸ್ಥೆ. ಆದಾಗ್ಯೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳನ್ನು ಪಾಲಿಕೆ ಸಾಮಾನ್ಯ ಸಭೆಗೆ ಕರೆಸಲಾಗಿತ್ತು. ಆದರೆ, ಅಧಿಕಾರಿಗಳು ಸದಸ್ಯರ ಸಲಹೆಗಳಿಗೆ ಸ್ಪಂದನೆ ನೀಡಲಿಲ್ಲ. ರಾಜ್ಯದ ಏಕೈಕ ಯೋಜನೆ ಅವಳಿನಗರ ಜನತೆಯ ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಲಿಲ್ಲ.-ಈರೇಶ ಅಂಚಟಗೇರಿ, ಮೇಯರ್
ಹುಬ್ಬಳ್ಳಿ- ಧಾರವಾಡ ಜನರಿಗೆ ಬಿಆರ್‌ಟಿಎಸ್ ಎಂಬ ವಿಫಲ ಯೋಜನೆ ಕಂಟಕವಾಗಿ ಪರಿಣಮಿಸಿದೆ. ಆರಂಭದಲ್ಲಿ ಉತ್ತಮವಾಗಿ ಕಂಡ ಬಸ್‌ಗಳಲ್ಲಿ ಈಗ ಹಿತಾನುಭವ ಇಲ್ಲ. ಹೆಚ್ಚಿನ ಜನರು ಕಿರಿದಾದ ರಸ್ತೆಯಲ್ಲಿ ತೊಂದರೆಯಲ್ಲಿ ಹೋಗಬೇಕು. ಜಂಕ್ಷನ್‌ಗಳಲ್ಲಿ ಜನ, ವಾಹನ ಸಂಚಾರ ಸಂಕಟಮಯವಾಗಿದೆ. ಎಲ್ಲ ಕಡೆ ವಿಫಲವಾಗುತ್ತಿರುವ ಈ ಯೋಜನೆ ಕೈ ಬಿಡುವುದು ಉತ್ತಮ. ಇದರ ಬದಲಾಗಿ ಎಲ್ಲ ಸುರಕ್ಷತಾ ಕ್ರಮ ಕೈಗೊಂಡು ಮೆಟ್ರೋ ಅಥವಾ ಮೊನೋ ರೈಲು ತರುವುದು ಒಳ್ಳೆಯದು.-ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡ
ಬಿಆರ್‌ಟಿಎಸ್ ಲಾಭದಾಯಕ ಸಂಸ್ಥೆಯಾಗಿ ಉಳಿದಿಲ್ಲ. ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಅವಳಿನಗರ ಮಧ್ಯೆ ಸುಮಾರು 34 ನಿಲ್ದಾಣಗಳಿದ್ದು, ಮಹಿಳೆಯರಿಗೆ ಶೌಚಗೃಹಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯ ಇಲ್ಲದ ಯೋಜನೆ ಇದು. 10 ವರ್ಷವಾಗುತ್ತ ಬಂದರೂ ಬಿಆರ್‌ಟಿಎಸ್ ಯೋಜನೆ ಇನ್ನೂ ಮುಗಿದಿಲ್ಲ. ಚರಂಡಿಗಳ ಹೂಳು ತೆಗೆದು ನೀರು ಸರಾಗವಾಗಿ ಹೋಗುವ ವ್ಯವಸ್ಥೆ ಮಾಡಬೇಕು. ಹಸಿರೀಕರಣ ಉದ್ದೇಶದಿಂದ ನೆಟ್ಟಿರುವ ಸಸಿಗಳಿಗೆ ನೀರುಣಿಸಬೇಕು.-ಮೋಹನ ಅರ್ಕಸಾಲಿ, ಧಾರವಾಡ ನಿವಾಸಿ