ಜಿಲ್ಲೆ

ಕೆಎಂಎಫ್, ಎನ್‌ಟಿಟಿಎಫ್ ಎದುರು ಜಲಗಂಡಾತರ

ಮಂಜುನಾಥ ಅಂಗಡಿ

ಮ0ಜುನಾಥ ಅಂಗಡಿ ಧಾರವಾಡ
ಹುಬ್ಬಳ್ಳಿ- ಧಾರವಾಡ ಮಧ್ಯೆ ಸ್ಥಾಪಿತ ಬಿಆರ್‌ಟಿಎಸ್ ವ್ಯವಸ್ಥೆ ಉತ್ತಮ ಯೋಜನೆಯಾದರೂ ಅವಾಂತರಗಳು ಮುಂದುವರಿದಿವೆ. ಅವಳಿನಗರದಲ್ಲಿ ಅನುಷ್ಠಾನಗೊಂಡ ರಾಜ್ಯದ ಮೊದಲ ಯೋಜನೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಜಲಗಂಡಾAತರ ತಂದೊಡ್ಡುತ್ತಿದೆ.
ಅವಳಿನಗರದ ಮಧ್ಯೆ ಬಿಆರ್‌ಟಿಎಸ್‌ನ ಸುಸಜ್ಜಿತ ಚಿಗರಿ ಬಸ್‌ಗಳು ಸಂಚರಿಸುತ್ತಿರುವುದರಿAದ ಪ್ರಯಾಣಿಕರಿಗೆ ಅನುಕೂಲವಾಗಿದೆ. ಸಾರಿಗೆ ಹಾಗೂ ಖಾಸಗಿ ವಾಹನಗಳ ಅವಲಂಬನೆ ಕಡಿಮೆಯಾಗಿದೆ. ಆದರೆ, ಕಾಮಗಾರಿ ದಶವಾರ್ಷಿಕ ಯೋಜನೆಯಂತೆ ಮುಂದುವರಿದಿದೆ.
ಮಳೆಗಾಲ ಆರಂಭವಾಗುತ್ತಿದ್ದAತೆ ಬಿಆರ್‌ಟಿಎಸ್‌ನ ಅವೈಜ್ಞಾನಿಕ ಕಾಮಗಾರಿ ಜನರ ಜೀವ ಹಿಂಡುತ್ತಿದೆ. ಸಣ್ಣ ಮಳೆಯಾಗುತ್ತಲೇ ಇಲ್ಲಿನ ಎನ್‌ಟಿಟಿಎಫ್ ಗಣಪತಿ ದೇವಸ್ಥಾನದ ಎದುರಿನ ರಸ್ತೆ ಕೆರೆಯಂತಾಗುತ್ತದೆ. ಎತ್ತರ ಪ್ರದೇಶದಿಂದ ಬರುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಇಲ್ಲಿದಿರುವುದು

ಈ ಅದ್ವಾನಕ್ಕೆ ಕಾರಣ. ಅಲ್ಲದೆ, ಮೇಲ್ಭಾಗದಿಂದ ಹರಿದುಬರುವ ನೀರು ಇರುವ ಚರಂಡಿಗಳನ್ನು ಆವರಿಸಿದೆ. ಅಽಕಾರಿಗಳು ಮಳೆಗಾಲಕ್ಕೂ ಪೂರ್ವ ತ್ಯಾಜ್ಯ ವಸ್ತುಗಳನ್ನು ತೆಗೆದು ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದೇರೀತಿ ಕೆಎಂಎಫ್ ಎದುರು ಸಹ ಮಳೆನೀರು ಸಂಗ್ರಹವಾಗುತ್ತದೆ.

ಗಂಟೆಗಟ್ಟಲೇ ಸಂಚಾರ ಬಂದ್: ಎನ್‌ಟಿಟಿಎಫ್ ಹಾಗೂ ಕೆಎಂಎಫ್ ಎದುರಿನ ರಸ್ತೆಗಳು ಜಲಾವೃತವಾದಾಗ ಅವಳಿನಗರದ ರಸ್ತೆ ಸಂಚಾರ ಗಂಟೆಗಟ್ಟಲೇ ಬಂದ್ ಆಗುತ್ತದೆ. ಹು-ಧಾ ಮಧ್ಯೆ ಸಂಚರಿಸಲು ಬೇರೆ ದಾರಿ ಇಲ್ಲದೆ ವಾಹನ ಸವಾರರು ನಿಂತಲ್ಲೇ ನಿಲ್ಲುವುದು ರೂಢಿಯಾಗಿದೆ. ರಸ್ತೆಯಲ್ಲಿ ೩- ೪ ಅಡಿ ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ.

ನಮ್ಮ ಧಾರವಾಡ ನಮ್ಮ ಹೆಮ್ಮೆ: ಅವಳಿನಗರ ಮಧ್ಯೆ ಅನುಷ್ಠಾನಗೊಂಡ ಬಿಆರ್‌ಟಿಎಸ್ ಯೋಜನೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕ್ಕೆ ಗುರಿಯಾಗುತ್ತಲೇ ಇದೆ. ಅಂದಾಜು ೧ ಸಾವಿರ ಕೋಟಿ ರೂ. ವೆಚ್ಚದ ಯೋಜನೆಯನ್ನು ಜನ ತೆಗಳುತ್ತಿದ್ದಾರೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದರಿಂದ ರಸ್ತೆಗಳು ಕೆರೆಯಂತಾಗುತ್ತವೆ. ಜಲಾವೃತವಾದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಧಾರವಾಡ ನಮ್ಮ ಹೆಮ್ಮೆ' ಎಂದು ಜನ ಜನಪ್ರತಿನಿಽಗಳ ಕಾಲೆಳೆಯುತ್ತಿದ್ದಾರೆ. ಇಂಜಿನಿಯರ್ ದಿನಾಚರಣೆಯಂದುಬಿಆರ್‌ಟಿಎಸ್ ಯೋಜನೆಯ ಇಂಜಿನಿಯರ್‌ಗಳನ್ನು ಹೊರತುಪಡಿಸಿ ಉಳಿದ ಇಂಜಿನಿಯರ್‌ಗಳಿಗೆ ಶುಭಾಶಯಗಳು' ಎಂದು ಜನ ಹೀಗಳೆಯುತ್ತಾರೆ.