ಜಿಲ್ಲೆ

ಆಸ್ತಿ ವಿಚಾರಕ್ಕೆ ಸಹೋದರನ ಪತ್ನಿ ಕೊಲೆ

ಕಲಘಟಗಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ ಹೆಂಡತಿಯನ್ನೇ ಕೊಲೆ ಮಾಡಿ, ಪರಾರಿ ಆಗಲು ಯತ್ನಿಸಿದವನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ತಾಲೂಕಿನ ಗಳಗಿ-ಹುಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗಳಗಿ ಹುಲಕೊಪ್ಪ ಗ್ರಾಮದ ನಿವಾಸಿ ಸಕ್ಕೂಬಾಯಿ ಬಸಪ್ಪ ಕಮ್ಮಾರ (35) ಕೊಲೆಯಾದ ಮಹಿಳೆ. ಶಿವಾಜಿ ಕಮ್ಮಾರ ಕೊಲೆ ಆರೋಪಿ. ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಿವಾಜಿ, ತಮ್ಮನ ಮನೆಗೆ ತೆರಳಿ ಆತನ ಹೆಂಡತಿ ಸಕ್ಕುಬಾಯಿ ಕೊರಳಿಗೆ ಹಗ್ಗ ಬೀಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆ ಮಾಡಿ ನಂತರ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಶಿವಾಜಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್‌ಐ ಕರಿವೀರಪ್ಪನವರ ಹಾಗೂ ಸಿಬ್ಬಂದಿ ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.