ಐಮನ್ ಬಾನು, ಮೃತೆ 
ಜಿಲ್ಲೆ

ಅಣ್ಣ ಜೈಲಿಗೆ, ತಂಗಿ ಮಸಣಕೆ

ಕೊಳ್ಳೇಗಾಲ: ಅಣ್ಣ ಮಗುವಿಗೆ ತೊಂದರೆ ಕೊಡಬೇಡ ಎಂದಿದ್ದಷ್ಟೇ ತಂಗಿ...ಸಿಟ್ಟಿಗೆದ್ದ ಅಣ್ಣ ಚಾಕುವಿನಿಂದ ತಂಗಿಯ ಕತ್ತು ಕೊಯ್ದುಬಿಟ್ಟ.. ಕೋಪಕ್ಕೆ ಬುದ್ಧಿ ಕೊಟ್ಟಿದ್ದರಿಂದ ಅಣ್ಣ ಜೈಲು ಸೇರಿದ, ತಂಗಿ ಮಸಣ ಸೇರಿದಳು.

ಇದು ಕೊಳ್ಳೇಗಾಲ ಪಟ್ಟಣದ ನೂರ್ ಮೊಹಲ್ಲಾದಲ್ಲಿ ಬುಧವಾರ ರಾತ್ರಿ ನಡೆದಿದ್ದ ಕೊಲೆ ಪ್ರಕರಣದ ಹಿಂದಿರುವ ಕಾರಣ. ಅಣ್ಣ ಸಯ್ಯದ್ ರ್ಮಾನ್ ತನ್ನ ತಂಗಿ ಐಮಾನ್ ಭಾನುಗೆ ಚಾಕುವಿನಿಂದ ಕತ್ತು ಕೊಯ್ದು, ತಂದೆ ಸಯ್ಯದ್ ಪಾಷ, ಅತ್ತಿಗೆ ತಸ್ಲೀಂ ತಾಜ್‌ಗೆ ಗಾಯಗೊಳಿಸಿದ್ದ. ಪರಿಣಾಮ ಐಮಾನ್‌ಭಾನು ಮೃತಪಟ್ಟಳು.

ಈ ಮೊಕದ್ದಮೆ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿ ಅಣ್ಣ ಸಯ್ಯದ್ ರೋಷನ್ ದೂರು ನೀಡಿದ್ದು, ಇದರಲ್ಲಿ ಘಟನೆಗೆ ಕಾರಣವಾಗಿರುವ ವಿಚಾರ ತಿಳಿದುಬಂದಿದೆ.

ಬುಧವಾರ ರಾತ್ರಿ ಮನೆಯಲ್ಲಿ ಸಯ್ಯದ್ ರ್ಮಾನ್(26) ಊಟ ಮಾಡುತ್ತಿದ್ದ. ಊಟ ಮುಗಿಸುವವರೆಗೂ ಅಣ್ಣನ ಮಗು ಮಲಗುವುದು ಬೇಡ ಎಂದಿದ್ದ. ಆದರೆ ತಂಗಿ ಐಮಾನ್‌ಭಾನು(26) ಮಗುವನ್ನು ಮಲಗಿಸಲು ಹೋಗಿದ್ದಕ್ಕೆ ಸಯ್ಯದ್ ರ್ಮಾನ್ ಸಿಟ್ಟಿಗೆದ್ದ. ತಂಗಿಗೆ ಬೈದು ಅಡುಗೆ ಮನೆಯಲ್ಲಿದ್ದ ಚಾಕು ತಂದು ಕತ್ತಿಗೆ ಚುಚ್ಚಿ ಗಾಯಗೊಳಿಸಿದ. ಕೆಳಗೆ ಬೀಳಿಸಿಕೊಂಡು ಕಾಲಿನಿಂದ ಒದ್ದು ನೋವು ಮಾಡಿದ. ಜಗಳ ಬಿಡಿಸಲು ಬಂದ ತಂದೆ ಸಯ್ಯದ್ ಪಾಷ ಅವರ ಕೈ ಮೂಳೆ ಮುರಿದು, ಅತ್ತಿಗೆ ತಸ್ಲೀಂತಾಜ್ ಕತ್ತಿಗೂ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ. ತಕ್ಷಣ ಅಕ್ಕಪಕ್ಕದವರು ಸಹಾಯಕ್ಕೆ ಬಂದರು. ಐಮಾನ್ ಭಾನು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮೃತಪಟ್ಟಳು. ಸಯ್ಯದ್ ಪಾಷ ಮತ್ತು ತಸ್ಲೀಂ ತಾಜ್ ಅವರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ತಸ್ಲೀಂ ತಾಜ್ ಅವರಿಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಐಮಾನ್‌ಭಾನು ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಆರೋಪಿ ಸಯ್ಯದ್ ರ್ಮಾನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಯ ವಿಚಾರ: ಸಯ್ಯದ್ ಪಾಷ ಮತ್ತು ರ್ಜಾನಾಗೆ ಐವರು ಮಕ್ಕಳು. ನೂರ್ ಮೊಹಲ್ಲಾದಲ್ಲಿ ಸಯ್ಯದ್ ರೋಷನ್, ಆರೋಪಿ ಸಯ್ಯದ್ ಫರ್ಮಾನ್, ಐಮಾನ್ ಭಾನು ಮತ್ತು ಮತ್ತೊಬ್ಬ ಮಗಳು, ಸೊಸೆ ತಸ್ಲೀಂ ತಾಜ್ (30) ಹಾಗೂ ಈಕೆಯ ಇಬ್ಬರು ಮಕ್ಕಳು ವಾಸವಿದ್ದರು.

ಸಯ್ಯದ್ ಫರ್ಮಾನ್ ಕಾರ್ ಮೆಕಾನಿಕ್ ಆಗಿದ್ದ. ದುಬೈ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ. ಕಳೆದ ಏಳೆಂಟು ತಿಂಗಳಿನಿಂದ ಕೊಳ್ಳೇಗಾಲದ ಮನೆಯಲ್ಲಿದ್ದ. ಈತನ ಕುರಿತು ತಂದೆ ಸಯ್ಯದ್ ಪಾಷ ಮಾಧ್ಯಮದರೊಂದಿಗೆ ಮಾತನಾಡಿ, ಸಯ್ಯದ್ ಫರ್ಮಾನ್‌ಗೆ ಆನ್‌ಲೈನ್ ಜೂಜಾಟದ ಚಟವಿತ್ತು. ಸಾಲವನ್ನು ಮಾಡಿಕೊಂಡಿದ್ದ. ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಹಿಂದೆ ಒಂದು ಬಾರಿ ಮನೆಯಲ್ಲಿ ಇದೇ ರೀತಿ ಗಲಾಟೆ ಮಾಡಿದ್ದ ಎಂದು ತಿಳಿಸಿದರು.