ಜಿಲ್ಲೆ

ಅಕ್ಕ- ತಮ್ಮ ಒಟ್ಟಿಗೆ ಸಿಎ ಪಾಸ್!

Udupi

ಉಡುಪಿ: ಹಿರಿಯಡಕ ಸಮೀಪದ ಕಾಜರಗುತ್ತಿನ ಅಕ್ಕ - ತಮ್ಮ ಇಬ್ಬರೂ ಒಟ್ಟಿಗೆ  ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆ ಪಾಸ್ ಆಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ರಘುನಾಥ್ ಕಾಮತ್- ರಾಧಿಕಾ ಕಾಮತ್ ದಂಪತಿಯ ಪುತ್ರಿ ಸುಪ್ರೀತಾ ಕಾಮತ್ ಹಾಗೂ ಪುತ್ರ ಸುಬ್ರಹ್ಮಣ್ಯ ಕಾಮತ್ ಈ ಸಾಧಕರು. ಇಬ್ಬರೂ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ಬಿ.ಕಾಂ. ಪದವೀಧರರಾಗಿದ್ದು, ಸುಪ್ರೀತಾ ಉಡುಪಿಯ ನಾಯಕ್ ಆ್ಯಂಡ್ ಅಸೋಸಿಯೇಟ್ಸ್‌ನಲ್ಲಿ, ಸುಬ್ರಹ್ಮಣ್ಯ ಅವರು ಕಾಮತ್ ಆ್ಯಂಡ್ ಕೋ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ಪೂರ್ಣಗೊಳಿಸಿದ್ದರು. ಸಿಎ ಪಾಸ್ ಮಾಡುವ ಗುರಿಯೊಂದಿಗೆ ಪ್ರತಿನಿತ್ಯ 8ರಿಂದ 10 ಗಂಟೆ ಅಭ್ಯಾಸ ಮಾಡುತ್ತಿದ್ದೆವು. ತಂದೆ- ತಾಯಿಯ ಸಹಕಾರ ಅನನ್ಯ. ಕಾಲೇಜು ಮತ್ತು ಆರ್ಟಿಕಲ್‌ಶಿಪ್‌ನಲ್ಲಿ ನಮಗೆ ಅತ್ಯುತ್ತಮ ಮಾರ್ಗದರ್ಶನ ದೊರೆಯಿತು ಎಂದು ‘ವಿಜಯವಾಣಿ’ ಜತೆಗೆ ಸುಬ್ರಹ್ಮಣ್ಯ ಹಾಗೂ ಸುಪ್ರೀತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮುಂದಿನ ಗುರಿ ಐಎಎಸ್: ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿ ಆಗಬೇಕು ಎಂಬುದು ನನ್ನ ಕನಸು. ಸಿಎ ನನ್ನ ಅಂತಿಮ ಗುರಿ ಅಗಿರಲಿಲ್ಲ. ಪಬ್ಲಿಕ್ ಸರ್ವೀಸ್ ನನ್ನ ಆದ್ಯತೆ ಆಗಿದ್ದು, ಐಎಎಸ್‌ಗೆ ಮುಂದೆ ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕು ಎಂದು ಸುಬ್ರಹ್ಮಣ್ಯ ಕಾಮತ್ ಹೇಳಿದ್ದಾರೆ.