ಜಿಲ್ಲೆ

ಟೇಬಲ್ ಟೆನಿಸ್​ನಲ್ಲಿ ಕಂಚಿನ ಪದಕ

Dharwada - Santosh Vaidya

ಹುಬ್ಬಳ್ಳಿ: ಜಿಲ್ಲೆಯ ಟೇಬಲ್ ಟೆನಿಸ್ ಪ್ರತಿಭೆ ಸುಚಿತ ಧರೇಣ್ಣವರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ.

ಲಾವೋಸ್​ನ ವಿಯೆಂಟಿಯಾನ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಡಬ್ಲ್ಯುಟಿಟಿ ಯುಥ್ ಕಂಟೆಂಡರ್ ಟೇಬಲ್ ಟೆನಿಸ್ ಪಂದ್ಯಾವಳಿಯ 11ವಯೋಮಿತಿಯ ಬಾಲಕರ ವಿಭಾಗದಲ್ಲಿ ಸುಚಿತ ಕಂಚಿನ ಪದಕ ಜಯಿಸಿದ್ದಾನೆ.

ಸೆಮಿಫೈನಲ್​ನಲ್ಲಿ ಥೈಲ್ಯಾಂಡ್​ನ ಥಾಮೆ ರತನವಾಚಿರಿನ ವಿರುದ್ಧ ಸೆಣಸಿದ್ದನು. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸಿಐಸಿ ಇಂಗ್ಲಿಷ್ ಮೀಡಿಯಂ ಸ್ಕೂಲ್​ನ 6ನೇ ತರಗತಿ ವಿದ್ಯಾರ್ಥಿಯಾಗಿರುವ ಸುಚಿತ ಚಿಕ್ಕ ವಯಸ್ಸಿನಿಂದಲೇ ಟೇಬಲ್ ಟೆನಿಸ್ ಅಭ್ಯಾಸ ಮಾಡುತ್ತಿದ್ದಾನೆ. ಈ ಹಿಂದೆ 11 ವಯೋಮಿತಿ ಬಾಲಕರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ ಶ್ರೀಲಂಕಾದ ಸಮರವೀರ ವಿರುದ್ಧ ಸೆಣಸಿ ವಿಶ್ವದಲ್ಲಿ 58ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದನು.

ಬೆಂಗಳೂರಿನ ತರಬೇತುದಾರ ವಿಜಯ ಕರಿಗಾರ ಅವರಲ್ಲಿ ಮೂರು ವರ್ಷ ತರಬೇತಿ ಬಳಿಕ ರಾಜ್ಯಮಟ್ಟದ ವಿವಿಧ ವಯೋಮಿತಿ ವಿಭಾಗದಲ್ಲಿ ಸುಚಿತ ಉತ್ತಮ ಪ್ರದರ್ಶನ ನೀಡಿದ್ದಾನೆ. ಈಗ ಅಂತಾರಾಷ್ಟ್ರೀಯ ತರಬೇತುದಾರ ತಿ ಲುಂಗ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.