ಹಿರಾಳು ಗ್ರಾಮದಲ್ಲಿ ಪವನ ವಿದ್ಯುತ್ ಫ್ಯಾನ್ ಮುರಿದು ಬಿದ್ದಿರುವುದು. 
ಜಿಲ್ಲೆ

ಮುರಿದು ಬಿದ್ದ ಪವನ ವಿದ್ಯುತ್ ಫ್ಯಾನ್

ನರೇಶ್ ಕುಮಾರ್

ಸಂಡೂರು: ಕಾಳಿಂಗೇರಿ ಗ್ರಾಪಂ ವ್ಯಾಪ್ತಿಯ ಹಿರಾಳು ಗ್ರಾಮದಲ್ಲಿ ಜಿಂದಾಲ್ ಕಂಪನಿಯ ಪವನ ವಿದ್ಯುತ್ ಫ್ಯಾನ್ ಶುಕ್ರವಾರ ನೆಲಕ್ಕುರುಳಿದೆ.

ಈ ಫ್ಯಾನ್‌ಗಳನ್ನು ಅಳವಡಿಕೆ ಜವಾಬ್ದಾರಿಯನ್ನು ಜಿ ಕಂಪನಿ ವಹಸಿಕೊಂಡಿದೆ. ದನಕರು, ಜನ ಓಡಾಡುವ ಸಂದಭರ್ದಲ್ಲಿ ಬಿದ್ದಿದ್ದರೆ ಏನು ಗತಿ?. ಕಳಪೆ ಕಾಮಗಾರಿಯಿಂದ ಮುರಿದು ಬಿದ್ದಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಮೇ 28ರಂದು ಅಗ್ರಹಾರ ಗ್ರಾಪಂ ವ್ಯಾಪ್ತಿ ನಲ್ಲಬಂಡದಲ್ಲಿ ಇದೇ ರೀತಿ ಫ್ಯಾನ್ ಮುರಿದು ಬಿದ್ದಿತ್ತು. ಇದು ಮರುಕಳಿಸದಂತೆ ಕಂಪನಿ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಚೋರನೂರು ಪಿಎಸ್‌ಐ ರೇವಣಸಿದ್ದಪ್ಪ ಪ್ರತಿಕ್ರಿಯಿಸಿ, ಜಿಂದಾಲ್ ಕಂಪನಿಯ ಪವನ ವಿದ್ಯುತ್ ಯಂತ್ರವನ್ನು ಜಿ ಎಂಬ ಕಂಪನಿ ಇನ್‌ಸ್ಟಾಲೇಷನ್ ಮಾಡಿದೆ. ಮಧ್ಯದಲ್ಲಿ ಬೆಂಡಾಗಿ ಫ್ಯಾನ್ ಬಿದ್ದಿದೆ. ಯಾವುದೇ ಅಹಿತಕರ ಘಟನೆಗಳಾಗಿಲ್ಲ.ರೈತರಾದ ಎಚ್.ಕೆ.ನಾಗರಾಜ್, ಶಂಕ್ರಪ್ಪ ಅವರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಹಾಳಾಗಿದೆ. ಅವರಿಗೆ ಪರಿಹಾರ ಕೊಡಬೇಕು ಎಂದು ಕಂಪನಿಯವರೊಂದಿಗೆ ಮಾತುಕತೆ ನಡೆದಿದೆ ಎಂದು ತಿಳಿಸಿದರು.