ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಬುಧವಾರ ಭೇಟಿ ನೀಡಿದ್ದ ಬ್ರಿಟನ್ ಪ್ರಧಾನಿ ರಿಶಿ ಸುನೆಕ್ ತಂದೆ ಯಶವೀರ್ ಸುನೆಕ್‌ರನ್ನು ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಸನ್ಮಾನಿಸಿ, ಆಶೀರ್ವದಿಸಿದರು. ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ, ಉಷಾ ಸುನೆಕ್ ಇದ್ದರು. 
ಜಿಲ್ಲೆ

ರಾಯರ ದರ್ಶನ ಪಡೆದ ಬ್ರಿಟನ್ ಪ್ರಧಾನಿ ತಂದೆ ತಾಯಿ

ರಾಯಚೂರು: ಬ್ರಿಟನ್ ಪ್ರಧಾನಿ ರಿಶಿ ಸುನೆಕ್ ತಂದೆ ಯಶವೀರ್ ಸುನೆಕ್ ಮತ್ತು ತಾಯಿ ಉಷಾ ಸುನೆಕ್ ಬುಧವಾರ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡರು.
ರಾಯರ ಪರಮ ಭಕ್ತೆಯಾಗಿರುವ ರಿಶಿ ಸುನೆಕ್ ಪತ್ನಿಯ ತಾಯಿ, ಇನೊಓಂೀಸಿಸ್ ಮುಖ್ಯಸ್ಥೆ ಸುಧಾಮೂರ್ತಿಯೊಂದಿಗೆ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿದ ಯಶವೀರ್ ಸುನೆಕ್ ಮತ್ತು ಉಷಾ ಸುನೆಕ್ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಸುಧಾಮೂರ್ತಿ ವರ್ಷದಲ್ಲಿ ಎರಡ್ಮೂರು ಬಾರಿ ಮಂತ್ರಾಲಯಕ್ಕೆ ಆಗಮಿಸಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಜತೆಗೆ ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆ ನೀಡುವ ಮೂಲಕ ರಾಯರಿಗೆ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ.
ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಯಶವೀರ್ ಸುನೆಕ್, ಉಷಾ ಸುನೆಕ್ ಮತ್ತು ಸುಧಾಮೂರ್ತಿಯನ್ನು ಸನ್ಮಾನಿಸಿ, ಆಶೀರ್ವದಿಸಿದರು.