ಜಿಲ್ಲೆ

ಬ್ರೈಟ್ ಬಿಜಿನೆಸ್ ಸ್ಕೂಲ್ ತಂಡಕ್ಕೆ ಬಹುಮಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಜೆ.ಜಿ. ಕಾಲೇಜ್ ಆಫ್ ಕಾಮರ್ಸ್ ವತಿಯಿಂದ ಕಳೆದ ಮೇನಲ್ಲಿ ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ನಗರದ ಬ್ರೈಟ್ ಬಿಜಿನೆಸ್ ಸ್ಕೂಲ್ ತಂಡ ಬಹುಮಾನ ಪಡೆದಿದೆ.

ಬಿಜಿನೆಸ್ ಸ್ಕೂಲ್‌ನ ರಕ್ಷಿತಾ ಆಕಳವಾಡಿ ಮತ್ತು ಸಾಕ್ಷಿ ಮಿರಜಕರ್ ಅವರನ್ನೊಳಗೊಂಡ ವಿದ್ಯಾರ್ಥಿಗಳ ತಂಡವು ಜೆ.ಜಿ. ಕಾಲೇಜಿನ ಪಿಜಿ ವಾಣಿಜ್ಯ ಅಧ್ಯಯನ ವಿಭಾಗ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಉತ್ಸವ "ಸುಸ್ಟೈನೇರಾ'ದಲ್ಲಿ ಎರಡನೇ ಬಹುಮಾನ ಪಡೆದುಕೊಂಡಿದೆ.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸುಸ್ಥಿರ ಮತ್ತು ಪರಿಸರ ಸ್ನೇಹಿಯಾದ ತ್ಯಾಜ್ಯದಿಂದ ಉಡುಪನ್ನು ತಯಾರಿಸುವುದು ಮತ್ತು ರ್ಯಾಂಪ್ ವಾಕ್ ಮಾಡುವ ಸ್ಪರ್ಧೆ ಇದಾಗಿತ್ತು. ವಿಜೇತ ತಂಡವನ್ನು ಬ್ರೈಟ್ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಅಭಿನಂದಿಸಿದ್ದಾರೆ.