ಜಿಲ್ಲೆ

ಬ್ರೈಟ್ ಬಿಜಿನೆಸ್ ಸ್ಕೂಲ್ ನಲ್ಲಿ ಎಂಬಿಎ ಉಡಾನ್

Dharwada - Basavaraj Idli

ಹುಬ್ಬಳ್ಳಿ: ವಿದ್ಯಾರ್ಥಿಗಳ ಸುದೀರ್ಘ ಶೈಕ್ಷಣಿಕ ಪಯಣ ಪ್ರಾರಂಭವಾಗುವುದೇ ಒಂದು ಪುಟ್ಟ ಹೆಜ್ಜೆಯಿಂದ. ಇದನ್ನೇ ಬದುಕಿನ ಶ್ರೇಷ್ಠತೆ ಸಂಪಾದಿಸಲು ಮಹತ್ತರ ಮೆಟ್ಟಿಲನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಹೇಳಿದರು.

ಇಲ್ಲಿಯ ಬ್ರೈಟ್ ಬಿಜಿನೆಸ್ ಸ್ಕೂಲ್ ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಂಬಿಎ ಉಡಾನ್- 2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ವ್ಯಾಪಾರ-ವ್ಯವಹಾರಗಳ ಪ್ರಪಂಚದಲ್ಲಿ ಹೊಂದಿಕೊಂಡು ನಿರ್ವಹಣೆ ಮಾಡುವ ಕಲೆಯನ್ನು ಅರಿತು ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಮುನ್ನೆಡೆಯಬೇಕು ಎಂದರು.

ಅತಿಥಿಗಳಾಗಿದ್ದ ಉದ್ಯಮಿ ಎಂ.ವಿ. ಕರಮರಿ ಮಾತನಾಡಿ, ಎಂಬಿಎ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಂಡು ಇತರರಿಗೆ ಸ್ಪೂರ್ತಿಯಾಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಜಿ.ಬಿ. ಹಳ್ಯಾಳ, ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು, ಸಮಾಜದಲ್ಲಿ ಬದಲಾವಣೆ ತರಲು ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಬೇಕು ಎಂದರು.

ಸೃಷ್ಟಿ ದೇಶಪಾಂಡೆ ಪ್ರಾಥಿರ್ಸಿದರು. ಬ್ರೈಟ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಸ್ವಾಗತಿಸಿದರು. ಪ್ರೊ. ನಿತಿನ್ ಚಂದ್ರ ಸಂಯೋಜನೆ, ಪ್ರೊ. ರಶ್ಮಿ ಫತೇಪೂರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ದೀಪಕ ನ್ಯಾಮನಗೌಡರ ವಂದಿಸಿದರು.