ಢವಳಗಿ : ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ 2024&25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಸೋಮವಾರ ವಿತರಣೆ ಮಾಡಲಾಯಿತು.
ಢವಳಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗೋವಿಂದರೆಡ್ಡಿ ಮೆದಕಿನಾಳ ಮಾತನಾಡಿ, ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ಮುಖ್ಯ ಬೆಳೆಗಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
ಸಾಕಷ್ಟು ಬೀಜದ ದಾಸ್ತಾನು ಇದ್ದು, ಯಾವುದೇ ಕೊರತೆ ಅಥವಾ ಅಭಾವ ಆಗಲಾರದು. ತೊಗರಿ, ಹೆಸರು ಬೀಜವನ್ನು ರೈತರಿಗೆ ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮುಸುಕಿನ ಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳನ್ನು ದಾಸ್ತಾನು ಮಾಡಲಾಗುವುದು. ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ, ಜಮೀನಿನ ಪಹಣಿ ಹಾಗೂ ಎ್ಐಡಿ (ರೈತರ ನೊಂದಣಿ ಸಂಖ್ಯೆ) ಯನ್ನು ತರಬೇಕು ಎಂದು ಹೇಳಿದರು.
ಸಂಗಮೇಶ ಚೌಧರಿ, ಸಂಗಮೇಶ ಸಜ್ಜನ, ಚನ್ನಪ್ಪಗೌಡ ಬಿರಾದಾರ, ರುದ್ರಗೌಡ ಪಾಟೀಲ, ಶಿವಶಂಕರ ಬೀರಗೊಂಡ, ಎ.ಬಿ.ಪಾಟೀಲ, ನಾಗರಾಜ ಹಳಬರ, ಶರಣು ಪಾಟೀಲ ಇತರರಿದ್ದರು.