ರಾಯಚೂರು: ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಉದಯನಿ ಸ್ಟಾಲಿನ್ ಶಿರಚ್ಛೇದನ ಮಾಡಿದವರಿಗೆ 10 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ ಪರಮಹಂಸಚಾರಿ ಸ್ವಾಮೀಜಿಯನ್ನು ಬಂಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕಾವಿ ಧರಿಸಿ ಕೊಲೆ ಮಾಡಲು ಸುಪಾರಿ ನೀಡುವಂತಹ ಹೇಳಿಕೆ ನೀಡುತ್ತಿರುವ ಸ್ವಾಮೀಜಿಗಳನ್ನು ದೇಶದಿಂದ ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು.
ಉದಯನಿ ಸ್ಟಾಲಿನ್ ಸನಾತನ ಧರ್ಮದ ನಿರ್ಮೂಲನೆ ಅಗತ್ಯ ಕುರಿತು ಹೇಳಿಕೆ ನೀಡಿರುವುದು ದೇಶದ ಬಹುಜನರ ಹಾಘೂ ಜಾತಿ ತುಳಿತ, ಧರ್ಮದ ದಬ್ಬಾಳಿಕೆಗೆ ಗುರಿಯಾದ ದಮನಿತರ ಮನದಾಳದ ಮಾತಾಗಿದೆ. ಸಮಾನತೆಯ ಶತ್ರುವಾಗಿರುವ ಸನಾತನವಾದ ನಾಶವಾಗಬೇಕಾಗಿದೆ.
ಸನಾತನವಾದ ಲಿಂಗ ತಾರತಮ್ಯ, ಸಂಪತ್ತಿನ ಅಸಮಾನತೆಯನ್ನು ಪ್ರತಿಪಾದಿಸುತ್ತಿದ್ದು, ಮೇಲ್ಜಾತಿಯವರು ಒಡೆಯರಾಗಿರಬೇಕು ಎಂದು ಹೇಳುತ್ತದೆ. ಸನಾತನವಾದವನ್ನು ಬಂಡವಾಳ ಮಾಡಿಕೊಂಡು ಬಿಜೆಪಿ, ಆರ್‌ಎಸ್‌ಎಸ್, ಭಜರಂಗದಳ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ.
ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವುದು ಸನಾತನವಾದಿಗಳಾಗಿದ್ದು, ಅವರ ವಿರುದ್ಧ ಧ್ವನಿ ಎತ್ತಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಕೂಡಲೇ ಉದಯನಿ ಸ್ಟಾಲಿನ್ ಶಿರಚ್ಛೇದನ ಹೇಳಿಕೆ ನೀಡಿರುವ ಸ್ವಾಮೀಜಿಯನ್ನು ಬಂಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ, ಪದಾಕಾರಿಗಳಾದ ಹೇಮರಾಜ ಅಸ್ಕಿಹಾಳ, ಮಾರೆಪ್ಪ ಹರವಿ, ಆಂಜಿನೇಯ ಕುರಬದೊಡ್ಡಿ, ಶ್ರೀನಿವಾಸ ಕಲವಲದೊಡ್ಡಿ, ಶ್ರೀನಿವಾಸ ಕೊಪ್ಪರ, ಆಂಜಿನೇಯ, ದುಳ್ಳಯ್ಯ, ನರಸಿಂಹಲು, ಗೋಪಾಲ, ತಿಮ್ಮಪ್ಪ, ವಿಕ್ರಂ ಪಾಲ್ಗೊಂಡಿದ್ದರು.