ಮೆಟ್ರಿ ಪ್ರಾಕೃಪಸ ಸಂಘ ಶಾಸಕ ಜೆ.ಎನ್.ಗಣೇಶ್ ಉದ್ಘಾಟಿಸಿದರು. ಪ್ರಮುಖರಾದ ಹೊಸಕೋಟೆ ಜಗದೀಶ, ಪಿ.ಮೂಕಯ್ಯಸ್ವಾಮಿ, ಕೆ.ಶ್ರೀನಿವಾಸರಾವ್, ಕೆ.ರಘುನಾಥರಾವ್ ಇತರರಿದ್ದರು. 
ಜಿಲ್ಲೆ

ಸೌಲಭ್ಯಗಳನ್ನು ರೈತರ ಮನೆಬಾಗಿಲಿಗೆ ಮುಟ್ಟಿಸಿ

ಕಂಪ್ಲಿ: ಹಿರೇಕೆರೆ ತುಂಬಿಸುವ ಯೋಜನೆ ಆರ್ಥಿಕ ಇಲಾಖೆಯ ಜವಾಬ್ದಾರಿಯಾಗಿದ್ದು, ಅನುಮೋದನೆ ದೊರಕಲಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ತಾಲೂಕಿನ ಮೆಟ್ರಿಯ ಪ್ರಾಕೃಪಸ ಸಂಘ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳು ರೈತರ ಮನೆ ಬಾಗಿಲಿಗೆ ಸೇವೆಸೌಲಭ್ಯಗಳನ್ನು ಮುಟ್ಟಿಸುವಲ್ಲಿ ಮುಂದಾಗಬೇಕಿದೆ ಎಂದರು.

ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ್ ಮಾತನಾಡಿ, ಕಳೆದ ಎರಡು ದಶಕಗಳ ಪ್ರಯತ್ನದಿಂದ ಗ್ರಾಮದಲ್ಲಿ ಸೊಸೈಟಿ ಸ್ಥಾಪಿಸಲು ಸಾಧ್ಯವಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ, ಸಾಲ ಸೌಲಭ್ಯ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ರೈತರು ಸಂಘದಲ್ಲಿ ನಿರಂತರವಾಗಿ ವ್ಯವಹರಿಸಬೇಕು. ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿ ಸಾಧ್ಯ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸ್‌ರಾವ್, ಗ್ರಾಪಂ ಅಧ್ಯಕ್ಷೆ ಸಿ.ಡಿ.ಗುಂಡಮ್ಮ, ಉಪಾಧ್ಯಕ್ಷ ಎನ್.ಕೆ.ಗಿರೀಶ, ಪ್ರಮುಖರಾದ ವಕೀಲ ಕೆ.ರಘುನಾಥರಾವ್, ಸೋಮಲಾಪುರ ಜಂಬಣ್ಣ, ಕೆ.ಗುಂಡಪ್ಪ, ಶರಣಪ್ಪ, ಕರಿಬಸನಗೌಡ, ಬಿ.ನಾರಾಯಣಪ್ಪ, ಕೆಶವರೆಡ್ಡಿ, ನಿರ್ದೇಶಕರಾದ ಸಂಗಟಿ ಮಾರೇಶ, ಗೌಡ್ರು ನಾಗರಾಜ, ಹೊನ್ನಳ್ಳಿ ಗಂಗಾಧರ, ಗಿರೆಡ್ಡಿ ಮರೇಗೌಡ, ಸಿ.ಡಿ.ಪಾಂಡುರಂಗ, ಪಿ.ಶೇಕ್ಷಾವಲಿ, ಜಮಾಪುರ ವೀರಭದ್ರಪ್ಪ, ಎಚ್.ಪಕ್ಕೀರಪ್ಪ, ಅಯ್ಯಪ್ಪಸಿಂದಿಗೇರಿ, ಜಿ.ಚಂದ್ರಶೇಖರ, ಕೆ.ಲಕ್ಷ್ಮೀ, ಎನ್.ಮಂಜುಳಾ, ಗೌಡ್ರು ಡಿಂಡಿ ಮಹರ್ಷಿ ಇತರರಿದ್ದರು.