ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಸವರಾಜು, ರೆಹಮಾನ್, ಮದಲೈ ಮುತ್ತು, ತೃಪ್ತಿ ಬೋಪಣ್ಣ, ಅರ್ಜುನ್ ಇದ್ದರು.  
ಜಿಲ್ಲೆ

್ರಕೃತಿಯೊಂದಿಗೆ ಅನನ್ಯತೆ ಹೊಂದಿರುವ ತೇಜಸ್ವಿ ಬರಹ

ಅಭಿನಯ್ ಎಚ್.ಎಂ

ವಿರಾಜಪೇಟೆ; ಸೇಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದಿಂದ ಪರಿಸರದಸ್ಮಿತೆ ಪೂಚಂತೇ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಬಸವರಾಜು ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿ ಬರಹಗಳು ಪ್ರಕೃತಿಯೊಂದಿಗೆ ಅನನ್ಯತೆ ಹೊಂದಿದೆ. ಪರಿಸರ ಜೀವಸಂಕುಲದ ಬಗ್ಗೆ ತೇಜಸ್ವಿ ಅವರು ಬರೆದಷ್ಟು ಬಹುಶಃ ಯಾವ ಬರಹಗಾರರೂ ಬರೆದಿರಲಾರರು ಎಂದು ಅಭಿಪ್ರಾಯಪಟ್ಟರು.

ಬಿಸಿಎ ವಿದ್ಯಾರ್ಥಿಗಳಾದ ಮಹಮ್ಮದ್ ಸಫ್ವಾನ್, ಆಶಿಕ್, ಮುಸ್ತಾಕ್ ಹಾಗೂ ಶಿಬಿಲ್ ವಿನ್ಯಾಸಗೊಳಿಸಿದ ಕಾಲೇಜಿನ ಕನ್ನಡ ಭಾಷಾ ಮುಖ್ಯಸ್ಥ ಅರ್ಜುನ್ ಮೌರ್ಯ ಅವರ ವೆಬ್‌ಸೈಟ್ ಅನ್ನು ಕಾಲೇಜಿನ ವ್ಯವಸ್ಥಾಪಕ ರೆ.ಫಾ.ದಲೈ ಮುತ್ತು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಕಾಲೇಜು ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಯೋಜಕಿ ಬಿ.ಡಿ.ಹೇಮಾ, ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ, ಸಹ ಪ್ರಾಧ್ಯಾಪಕಿ ಪ್ರತಿಮಾ ಹರೀಶ್‌ರೈ ಇತರರಿದ್ದರು.