ಕವಿತಾಳ: ತ್ರಯಂಬಕೇಶ್ವರ ಜಾತ್ರೆ ಅಂಗವಾಗಿ ಬುಧವಾರ ಹಮ್ಮಿಕೊಂಡ ದನಗಳ ಜಾತ್ರೆಯಲ್ಲಿ ಬಿಸಿಲಿಗೆ ಜಾನುವಾರುಗಳು ತತ್ತರಿಸಿದವು.
ಇದನ್ನೂ ಓದಿ: ಶ್ರೀಗುರು ಪರದೇಶಪ್ಪ ಮಠದಲ್ಲಿ ಅದ್ದೂರಿ ಜಾತ್ರೆ ಸಂಪನ್ನ
ದನಗಳ ಜಾತ್ರೆಗಾಗಿ ಜಿಲ್ಲೆಯ ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸಗೂರು, ಮಸ್ಕಿ ತಾಲೂಕ ಸೇರಿದಂತೆ ಯಾದಗಿರಿ, ಕೊಪ್ಪಳ, ಬಾಗಲಕೋಟೆ ಜಿಲ್ಲೆಯಿಂದ ಮೂರು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಬಂದಿದ್ದವು. ಕಿಲಾರಿ, ಸೀಮೇ, ಜವಾರಿ ಸೇರಿ ವಿವಿಧ ತಳಿಗಳ ಎತ್ತುಗಳನ್ನು ರೈತರು ಮಾರಾಟ ಮಾಡಿದರು.
ಮೂರುದಿನದಿಂದ ಬಿಸಿಲಿನಲ್ಲಿಯೇ ನಿಂತು ಎತ್ತುಗಳನ್ನು ಮಾರಾಟಮಾಡಲಾಗುತ್ತಿದೆ. ಆದರೆ, ಇದುವರೆಗೂ ಖರೀದಿಸಲು ಯಾರು ಬಂದಿಲ್ಲ ಎಂದು ರೈತ ನಾಗಪ್ಪ ಗೌಡ ಗುಡಗುಂಟಿ ಅಳಲು ತೋಡಿಕೊಂಡರು.
ಲಿಂಗಸುಗೂರುನಿಂದ ರಾಯಚೂರಿಗೆ ತುರ್ತು ಕೆಲಸಕ್ಕಾಗಿ ಹೋಗುತ್ತಿರುವಾಗ ರಸ್ತೆಯಲ್ಲಿ ದನಗಳ ಮಾರಾಟ ನಡೆದಿರುವುದರಿಂದ ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಸಮಸ್ಯೆಯಿಂದ ಪರದಾಡುವಂತಾಯಿತು. ಪಟ್ಟಣದಲ್ಲಿ ವಿಶಾಲವಾದ ಎಪಿಎಂಸಿ ಆವರಣವಿದೆ. ಅದನ್ನು ಸ್ವಚ್ಛಗೊಳಿಸಿ ದನಗಳ ಜಾತ್ರೆ ನಡೆಸಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದವು.
ರೈತ.ಶಿವರಾಜ ಮಲ್ಲದಗುಡ್ಡದನಗಳನ್ನು ಉಳುಮೆಗಾಗಿ ಆರೋಗ್ಯ ಮತ್ತು ಗೊಬ್ಬರಕ್ಕಾಗಿ ಸಾಕಾಣೆ ಮಾಡಲಾಗುತ್ತದೆ. ಕಳೆದ ಹತ್ತುವರ್ಷದಿಂದ ಉತ್ತಮವಾದ ಎತ್ತುಗಳನ್ನು ಸಾಕಿದ್ದೇವೆ. ಈಗ ಇವುಗಳ ನಿರ್ವಹಣೆ ಕಷ್ಟವಾಗುತ್ತಿದ್ದು ಮಾರಾಟ ಮಾಡಲು ಬಂದರೆ, ಕೊಳ್ಳುವವರು ಇಲ್ಲ. ತ್ರಯಂಬಕೇಶ್ವರ ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ.ವಿಶ್ವನಾಥ ಕಾಮರಡ್ಡಿದೇವಸ್ಥಾನ ಸಮಿತಿಯಿಂದ ದನಗಳ ಜಾತ್ರೆಯನ್ನು ಗ್ರಾಮಸ್ಥರೊಂದಿಗೆ ಚರ್ಚಿಸಿ ಎಪಿಎಂಸಿಯಲ್ಲಿ ಮಾಡಲು ತಿರ್ಮಾನಿಸಲಾಗಿತ್ತು. ಅಲ್ಲಿ ವಿಪರೀತ ಬೇಲಿ ಬೆಳೆದ ಕಾರಣ ಆಯೋಜಿಸಲಿಲ್ಲ. ಮುಂದಿನ ದಿನದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು.