ಸಿರವಾರದಲ್ಲಿ ಉಪ ತಹಸೀಲ್ದಾರ್ ಸಿದ್ದನಗೌಡಗೆ ಬ್ರಾಹ್ಮಣ ಮಹಾಸಭಾ, ಹರಿಹರೆ ಸೇವಾ ಟ್ರಸ್ಟ್ ಮತ್ತು ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರಮೇಶ ದರ್ಶನಕರ್, ಕೃಷ್ಣಾಜಿರಾವ್ ಸೂರ್ಯವಂಶಿ, ಎನ್.ಉದಯಕುಮಾರ, ಜೆ.ಶಿವರಾಮ ರೆಡ್ಡಿ ಗೌಡ, ಜಿ.ಲೋಕರೆಡ್ಡಿ, ಆರ್.ಜಯರಾಮಯ್ಯ ಶೆಟ್ಟಿ, ವೈ ಭೂಪನಗೌಡ, ಎಂ.ನಿಂಬಯ್ಯ ಸ್ವಾಮಿ, ಆರ್.ಕೆ.ಬಸವರಾಜ ಸಾಹುಕಾರ್, ಶ್ರೀನಿವಾಸ ಜೋಶಿ, ನರಸಿಂಹರಾವ್ ಕುಲಕರ್ಣಿ, ತಿರಮಲರಾವ್ ಕುಲಕರ್ಣಿ ಇತರರಿದ್ದರು 
ಜಿಲ್ಲೆ

ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಬೀಳಲಿ

ನರೇಶ್ ಕುಮಾರ್

ಸಿರವಾರ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಹಾಗೂ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸ ಖಂಡಿಸಿ ಬ್ರಾಹ್ಮಣ ಮಹಾಸಭಾ, ಹರಿಹರ ಸೇವಾ ಟ್ರಸ್ಟ್ ಮತ್ತು ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ, ಉಪ ತಹಸೀಲ್ದಾರ್ ಸಿದ್ದನಗೌಡಗೆ ಮನವಿ ಸಲ್ಲಿಸಲಾಯಿತು.

ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ. ಸಂವಿಧಾನದಲ್ಲಿ ಎಲ್ಲ ಧರ್ಮಗಳನ್ನು ಆಚರಿಸಲು ಸಮಾನ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ಧರ್ಮ ವಿರೋಧಿ ನೀತಿ ಅನುಸರಿಸಲಾಗಿದ್ದು, ಖಂಡನೀಯ. ಈ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಜಾಗ್ರತೆವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎರಡು ದಿನಗಳ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಧರ್ಮಾಧಾರಿತ ಪೈಶಾಚಿಕ ಕೃತ್ಯ ಖಂಡನಾರ್ಹ. ಧರ್ಮ ಕೇಳಿ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಪ್ರತಿಯೊಬ್ಬರೂ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಉಗ್ರರನ್ನು ಮಟ್ಟ ಹಾಕಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ ಕೂಡಲೇ ಕಾರ್ಯಾಚರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಉಗ್ರರ ಗುಂಡಿನ ದಾಳಿಗೆ ಹತ್ಯೆಗೀಡಾದ ಪ್ರವಾಸಿಗರಿಗೆ ಶಾಂತಿ ಕೋರಿ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು. ಹರಿಹರೆ ಸೇವಾ ಟ್ರೇಸ್ಟ್ ಅಧ್ಯಕ್ಷ ರಮೇಶ ದರ್ಶನಕರ್, ಪ್ರಮುಖರಾದ ಕೃಷ್ಣಾಜಿರಾವ್ ಸೂರ್ಯವಂಶಿ, ಎನ್.ಉದಯಕುಮಾರ, ಜೆ.ಶಿವರಾಮ ರೆಡ್ಡಿ ಗೌಡ, ಜಿ.ಲೋಕರೆಡ್ಡಿ, ಆರ್.ಜಯರಾಮಯ್ಯ ಶೆಟ್ಟಿ, ವೈ ಭೂಪನಗೌಡ, ಎಂ.ನಿಂಬಯ್ಯ ಸ್ವಾಮಿ, ಆರ್.ಕೆ.ಬಸವರಾಜ ಸಾಹುಕಾರ್, ಶ್ರೀನಿವಾಸ ಜೋಶಿ, ನರಸಿಂಹರಾವ್ ಕುಲಕರ್ಣಿ, ತಿರಮಲರಾವ್ ಕುಲಕರ್ಣಿ, ವೆಂಕಟೇಶ್ವರರಾವ್, ಹನುಮಂತ ರಾವ್, ಸುರೇಶ ಬಾಬು ಶೆಟ್ಟಿ, ವಸುಧೇಂದ್ರ ಜೋಶಿ, ಪ್ರಾಣೇಶ ಆಚಾರ್, ಕುಪ್ಪಾಚಾರ್ಯ ಜೋಶಿ, ಚಂದ್ರಕಾಂತ ಆಚಾರ್ಯ, ಎಂ.ರಮೇಶ ಶೆಟ್ಟಿ, ಜೆ.ದೇವರಾಜಗೌಡ ಪಾಟೀಲ್, ಚುಕ್ಕಿ ಉಮಾಪತಿ ಸಾಹುಕಾರ್, ಶಿವಶರಣ ಸಾಹುಕಾರ್ ಅರಕೇರಿ, ಸಂದೀಪ ಪಾಟೀಲ್, ಕೃಷ್ಣ ನಾಯಕ, ಕಾಶಿನಾಥ ಸರೋದೆ, ವಿಜಯ ಕುಮಾರ ಗುಡ್ಡದಮನಿ, ವಿರೂಪಾಕ್ಷ ಗೌಡ ನಂದರಡ್ಡಿ, ಗುರುನಾಥ ರಡ್ಡಿ, ಕೆ.ರಾಘವೇಂದ್ರ ಇತರರಿದ್ದರು.