ಉಟಕನೂರು ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದರು. ಉಟಕನೂರು ಮಠದ ಪೀಠಾಧಿಪತಿ ಮರಿ ಬಸವರಾಜ ದೇಶಿಕೇಂದ್ರ ಸ್ವಾಮಿ, ಪ್ರಮುಖರಾದ ರಾಮನಗೌಡ ಪೋ.ಪಾ, ಶಿವಪುತ್ರಪ್ಪ, ಸಿದ್ದಪ್ಪ ಪೂಜಾರಿ, ಪ್ರಾಣೇಶ, ಶರಣಪ್ಪ, ಮಲ್ಲಯ್ಯ, ಶಿವರಾಜ ಇತರರಿದ್ದರು. 
ಜಿಲ್ಲೆ

ಸೇತುವೆ ನಿರ್ಮಾಣಕ್ಕೆ 9 ಕೋಟಿ ರೂ. ಅನುದಾನ

Kopala - Desk - Eraveni

ಕವಿತಾಳ: ಉಟಕನೂರು ಮತ್ತು ಧೋತರಬಂಡಿ ಗ್ರಾಮಗಳ ಮಧ್ಯೆದ ಹಳ್ಳಕ್ಕೆ ಸೇತುವೆ ನಿರ್ಮಿಸಲು ಒಂಬತ್ತು ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಮಾನ್ವಿ ತಾಲೂಕಿನ ಉಟಕನೂರಿನಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ 25 ಲಕ್ಷ ರೂ. ವೆಚ್ಚದ ಎರಡು ಹೆಚ್ಚುವರಿ ಶಾಲಾ ಕಟ್ಟಡ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ತಾಲೂಕು ಅಲ್ಲದೆ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದ ಉಟಕನೂರು ಮಠಕ್ಕೆ ಹೋಗಬೇಕು ಎಂದರೆ ಧೋತರಬಂಡಿ ಹಳ್ಳದ ಸೇತುವೆ ದಾಟಬೇಕು. ಇದು ಕಿರಿದಾಗಿದ್ದು, ಮಳೆ ಬಂದರೆ ಹಳ್ಳ ತುಂಬಿ ಹರಿದರೆ ಭಕ್ತರು ಪರದಾಡಬೇಕಾಗುತ್ತೆ. ಸಚಿವ ಎನ್.ಎಸ್. ಬೋಸರಾಜು ಅವರ ಚರ್ಚೆ ಮಾಡಿ ಸೇತುವೆ ನಿರ್ಮಿಸಲು ಅನುದಾನ ಮಂಜೂರು ಮಾಡಲಾಗಿದೆ.

ಆಂಜನೇಯ ದೇಸವಸ್ಥಾನದಿಂದ ಮರಿಬಸವಲಿಂಗ ದೇಶಿಕೇಂದ್ರ ಸ್ವಾಮಿಗಳ ಮಠದವರೆಗೆ ಭಕ್ತರ ಅನುಕೂಲಕ್ಕಾಗಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು. ಉಟಕನೂರು ಮಠದ ಪೀಠಾಧಿಪತಿ ಮರಿ ಬಸವರಾಜ ದೇಶಿಕೇಂದ್ರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಪ್ರಮುಖರಾದ ರಾಮನಗೌಡ ಪೋ.ಪಾ, ಮಲ್ಲಮ್ಮ, ಶಿವಪುತ್ರಪ್ಪ, ಸಿದ್ದಪ್ಪ ಪೂಜಾರಿ, ಪ್ರಾಣೇಶ, ಶರಣಪ್ಪ, ಮಲ್ಲಮ್ಮ, ಶಿವರಾಜ ಇತರರಿದ್ದರು.