ಕಡಬ: ಕಳೆದ ರಾತ್ರಿ ಹೊಳೆಯಲ್ಲಿ ಬಂದ ಭಾರಿ ಪ್ರವಾಹಕ್ಕೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಸಮೀಪದ ಸಂತಡ್ಕ ಎಂಬಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ನೀರಿನೊಂದಿಗೆ ಕಾಡಿನಿಂದ ಮರದ ದಿಮ್ಮಿ, ಕಸ ಕಡ್ಡಿಗಳು ಜೊತೆ ಯಾಗಿ ಹರಿದ ಪರಿಣಾಮ ಸೇತುವೆ ಮುರಿದು ಈ ಭಾಗದ ಸುಮಾರು 200 ಕ್ಕೂ ಹೆಚ್ಚು ಕುಂಟುಂಬ ಸಂಪರ್ಕ ಕಳೆದುಕೊಂಡಿದೆ. 2018 ರಲ್ಲಿ ಸುರಿದ ಭಾರಿ ಮಳೆಗೆ ಸೇತುವೆಗೆ ಹಾನಿಯಾಗಿತ್ತು. ಬಳಿಕ ತೇಪೆ ಹಚ್ಚಿ ಸರಿಪಡಿಸಲಾಗಿತ್ತು. ಆ.1ರಂದು ಭಾರಿ ಮಳೆಯ ಪ್ರಭಾವದಿಂದ ಸ್ವಲ್ಪ ಹಾನಿಯಾಗಿತ್ತು. ನಾಳೆ ಮಳೆ ಬಂದರೆ ಸೇತುವೆ ಕೊಚ್ಚಿ ಹೋಗುವ ಅಭಿಪ್ರಾಯವನ್ನು ಸ್ಥಳಿಯರು ವ್ಯಕ್ತಪಡಿಸಿದ್ದರು. ಅದೀಗ ನಿಜವಾಗಿದೆ. ಇದೇ ನದಿಗೆ ಈ ಸೇತುವೆಯ ಅನತಿ ದೂರದಲ್ಲಿದ್ದ ತೂಗು ಸೇತುವೆಗೂ ಹಾನಿಯಾಗಿದೆ. ಹಾಗಾಗಿ ಓಡಾಡಲು ಸಾದ್ಯವಿಲ್ಲದಂತಾಗಿದೆ.