ಜಿಲ್ಲೆ

ಜೊಯಿಡಾ ಕೈಟಾ ಸೇತುವೆ ಕುಸಿತ

Uttara Kannada - Subash Hegde
ಜೊಯಿಡಾ: ಬಾರಿ ಮಳೆಯ ಕಾರಣ ದಾಂಡೇಲಿ- ಗುಂದ- ಉಳವಿ ಸಾಗುವ ರಾಜ್ಯ ಹೆದ್ದಾರಿ ಕೈಟಾ ಊರಿನ ಹತ್ತಿರ  ಹಳ್ಳಕ್ಜೆ ಕಟ್ಟಲಾದ ಸೇತುವೆ ಕುಸಿದಿರುವ ಕಾರಣ ಸಂಪೂರ್ಣ ಬಂದ್ ಆಗುವ ಹಂತದಲ್ಲಿದೆ.
ಈ ರಸ್ತೆ ಗುಂದ ಮತ್ತು ಉಳವಿ ಸಾಗುವ ಪ್ರಮುಖ ರಸ್ತೆ ಮಾರ್ಗವಾಗಿದ್ದು,  ಸೇತುವೆ ಕುಸಿಯುತ್ತಿರುವ ಕಾರಣ ಸಾರ್ವಜನಿಕರು ಜೊಯಿಡಾ- ದಾಂಡೇಲಿ ಸಾಗಬೇಕಾದರೆ ಉಳವಿ- ಕುಂಬಾರವಾಡಾ ಮಾರ್ಗದ ಮುಖಾಂತರ ಸುತ್ತಿ ಬರಬೇಕಾದ ಸ್ಥಿತಿ ಬರಲಿದೆ.