ರಾಣೆಬೆನ್ನೂರ: ಬ್ರೀಡ್ಜ್ ಕಂ ಬ್ಯಾರೇಜ್ನ 3.96 ಲಕ್ಷ ರೂ. ಮೌಲ್ಯದ 33 ಗೇಟ್ಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ನಿಟ್ಟೂರ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ಬಳಿಯಿರುವ ಬ್ಯಾರೇಜ್ಗೆ 2015ರಲ್ಲಿ 60 ಗೇಟ್ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಮುಂಗಾರು ಬಂದಾಗ ಗೇಟ್ ತೆಗೆದು ಇಡುವುದು ಮತ್ತು ಮುಂಗಾರು ಮುಗಿದ ಮೇಲೆ ನವೆಂಬರ್ನಲ್ಲಿ ಗೇಟ್ ಅಳವಡಿಸುವ ಕಾರ್ಯ ಮಾಡಲಾಗುತ್ತಿತ್ತು.
ಆದರಂತೆ ಕಳೆದ ಏಪ್ರೀಲ್ ತಿಂಗಳಲ್ಲಿ ಗೇಟ್ ತೆಗೆದು ಇಡಲಾಗಿತ್ತು. ಯಾರೋ ಕಳ್ಳರು ಅವುಗಳನ್ನು ದೋಚಿದ್ದಾರೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮಣಿಕಂಠ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.