ಜಿಲ್ಲೆ

ಫೆ.5ರಂದು ವೀರಶೈವ ಲಿಂಗಾಯತ ವಧು-ವರದ ಸಮಾವೇಶ

ಚಿತ್ರದುರ್ಗ: ಶಿವಮೊಗ್ಗದ ಗುರುಶಾಂತ ವೀರೇಶ್ವರ ಸೇವಾ ಸಮಿತಿ ವತಿಯಿಂದ ಚಿತ್ರದುರ್ಗದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಫೆ.5ರ ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ‌್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸ್ಥಾಪನೆಯಾದ ಈ ಸಮಿತಿ 10 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ, ವೀರಶೈವ ಲಿಂಗಾಯತ ವಧು-ವರರ ಸಮಾವೇಶಗಳನ್ನು ಏರ್ಪಡಿಸುವ ವಿವಾಹಕ್ಕೆ ಅನುಕೂಲ ಮಾಡಿಕೊಡುತ್ತಿದೆ ಎಂದರು.

ವಿಧವೆ, ವಿಧುರ, ಅಂಗವಿಕಲರಿಗೂ ಆದ್ಯತೆ ಇರುತ್ತದೆ. ಸಮಿತಿಯಿಂದ 1000ಕ್ಕೂ ಹೆಚ್ಚು ಮದುವೆಗಳಾಗಿವೆ. ಫೆ.12ರಂದು ಬೆಂಗಳೂರಿನ ಅತ್ತಿಗುಪ್ಪೆ ಹಂಪಿ ನಗರ ಕೇಂದ್ರ ಗ್ರಂಥಾಲಯ ಮತ್ತು ಫೆ.26ರಂದು ವಿಜಯಪುರದ ಬಂಜಾರ್ ಹೈಸ್ಕೂಲ್ ಬಳಿಯ ಲಿಂಗಾಯತ ಭವನದಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. ಆಸಕ್ತರು ಶುಲ್ಕ

ರಹಿತವಾಗಿ (08194-231130, 8762252130, 9449618130) ಹೆಸರು ನೋಂದಾಯಿಸ ಬಹುದು ಎಂದು ಹೇಳಿದರು. ಲೋಕೇಶಯ್ಯ, ಸುಮಾ, ರಶ್ಮಿ, ಶಾಂತವೀರಯ್ಯ, ಓಂಕಾರಸ್ವಾಮಿ ಇದ್ದರು.