ಜಿಲ್ಲೆ

ಉಸಿರಾಟದ ತೊಂದರೆಯಿಂದ ಸ್ಥಳದಲ್ಲಿಯೆ ಮೃತಪಟ್ಟ ಬಿಹಾರದ ಯುವಕ

Haveri - Kariyappa Aralikatti

ರಾಣೆಬೆನ್ನೂರ: ಉಸಿರಾಟದ ತೊಂದರೆಯಿಂದ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕಮದೋಡ ಬಳಿ ಗುರುವಾರ ಸಂಭವಿಸಿದೆ.
ಬಿಹಾರದ ಸೋನುಕುಮಾರ ತಾಂತಿ (24) ಮೃತ ಯುವಕ.
ಈತ ಕಮದೋಡ ಬಳಿಯ ಸ್ಟೋನ್ ಕ್ರಷರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಬೆಳಗಿನ ಜಾವ ಏಕಾಏಕಿ ಉಸಿರಾಟದ ತೊಂದರೆ ಉಂಟಾಗಿದ್ದು, ಇದರಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.