ಗಂಗಾವತಿ: ನಗರದ ಮಹೆಬೂಬ್‌ನಗರದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಿಡಿಪಿಒ ಇಲಾಖೆಯಿಂದ ಸ್ತನ್ಯ ಪಾನ ಸಪ್ತಾಹಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಇದನ್ನೂ ಓದಿ:http://ಸ್ತನ್ಯ ಪಾನ ಸಪ್ತಾಹಕ್ಕೆ ಚಾಲನೆ
ಕ್ಷಯ ರೋಗ ವಿಭಾಗ ಮತ್ತು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಟಾನದಿಂದ ಹಮ್ಮಿಕೊಂಡಿದ್ದ ಸಪ್ತಾಹದಲ್ಲಿ ತಾಯಿಹಾಲು ಮಗುವಿಗೆ ದಿವ್ಯಔಷಧದ ಕುರಿತು ಮಾಹಿತಿ ನೀಡಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನೆಹನಾಜ್ ಮಾತನಾಡಿ, ನವಜಾತ ಶಿಶುವಿನ ಬೆಳವಣಿಗೆಗೆಯಲ್ಲಿ ತಾಯಿ ಎದೆ ಹಾಲು ಪ್ರಮುಖಪಾತ್ರ ವಹಿಸಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದು.
ಶಿಶುಗಳಿಗೆ ಹಾಲುಣಿಸಲು ತಾಯಂದಿರನ್ನು ಉತ್ತೇಜಿಸುವುದು ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಸಪ್ತಾಹದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಮುದಾಯ ಅಧಿಕಾರಿ ವಿಜಯಲಕ್ಷ್ಮಿ, ಕೆಎಚ್‌ಪಿಟಿ ಸಮುದಾಯ ಸಂಯೋಜಕ ಹನುಮಂತಪ್ಪ ಇತರರಿದ್ದರು.