ಜಿಲ್ಲೆ

ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಮುಖ್ಯ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ತಾಯಿಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶ ಒಳಗೊಂಡಿದ್ದು, ಮೊದಲ ಆರು ತಿಂಗಳು ಸ್ತನ್ಯಪಾನ ಮಾಡಿಸುವುದು ಮುಖ್ಯ ಎಂದು ಕೆಎಲ್​ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕಮಕ್ಕಳ ತೆ ಡಾ. ಸೋನಾಲಿ ಬಿಜ್ಜರಗ್ಗಿ ಹೇಳಿದರು.

ನಗರದ ಕೆಎಲ್​ಇ ವೇಣುಧ್ವನಿ 90.4 ಎಫ್​.ಎಂ. ಕೇಂದ್ರದಲ್ಲಿ ಕೆಎಲ್​ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್​ಇ ಜವಾಹರಲಾಲ್​ ನೆಹರೂ ವೈದ್ಯಕಿಯ ಮಹಾವಿದ್ಯಾಲಯ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ನೇರ ಫೋನ್​&ಇನ್​ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಟ್ಟಿದ ತಕ್ಷಣ ಬರುವ ಕೊಲಸ್ಟ್ರಮ್​ ತುಂಬಾ ಪೌಷ್ಟಿಕವಾಗಿರುತ್ತದೆ. ಮಗು ತಾಯಿಹಾಲಿನ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ ಎಂದರು. ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್​. ಮಂಜುನಾಥ ಪೈ ಇದ್ದರು.