ಬಾಗಲಕೋಟೆ ವಿದ್ಯಾಗಿರಿ ಕಿಡ್ಜಿ ಶಾಲೆಯಲ್ಲಿ ಸ್ತನಪಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಸವಿತಾ ಅಂಗಡಿ, ಪ್ರವೀಣ ನವಲಗುಂದ, ಮಹೇಶ್ವರಿ ಶಿರೋಳ, ಗುರು ಹಿರೇಮಠ, ರಾಜೇಶ್ವರಿ ದೇಶಪಾಂಡೆ ಇತರರಿದ್ದರು. 
ಜಿಲ್ಲೆ

ಸ್ತನಪಾನದಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ಗಿರೀಶ ಸಗರ

ಬಾಗಲಕೋಟೆ: ಕಂದಮ್ಮಗಳಿಗೆ ತಾಯಿ ಎದೆ ಹಾಲು ದಿವ್ಯ ಔಷಧವಾಗಿದೆ ಎಂದು ಶಾರದಾಂಬಾ ನರ್ಸಿಂಗ್ ಇನ್‌ಸ್ಟಿಟ್ಯೂಟ್ ಉಪನ್ಯಾಸಕಿ ಸವಿತಾ ಅಂಗಡಿ ಹೇಳಿದರು.

ಸ್ತನಪಾನ ಕುರಿತು ಜಾಗೃತಿ ಮೂಡಿಲು ನಗರದ ವಿದ್ಯಾಗಿರಿ ಕಿಡ್ಜಿ ಶಾಲೆ ಮಕ್ಕಳ ತಾಯಂದಿರಿಗೆ ಈಚೆಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಇಂದು ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ ಕೂಸುಗಳಿಗೆ ಅಗತ್ಯಕ್ಕೆ ತಕ್ಕಂತೆ ಬಾಣಂತಿಯರು ಹಾಲು ಕುಡಿಸಲು ಸಾಧ್ಯವಾಗುತ್ತಿಲ್ಲ.

ಇದಲ್ಲದೇ ಬೇರೆ ಬೇರೆ ಕಾರಣಗಳಿಂದ ಪಟ್ಟಣದ ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸುವುದನ್ನು ಮರೆಯುತ್ತಾರೆ.

ತಾಯಿ ಎದೆ ಹಾಲಿನಿಂದ ಕಂದಮ್ಮಗಳಿಗೆ ರೋಗ ನಿರೋಧಕ ಶಕ್ತಿ ದೊರೆಯುತ್ತದೆ ಎಂಬುದನ್ನು ಮರೆಯಬಾರದು. ಬಾಣಂತಿಯರು ಸಮತೋಲನ ಆಹಾರ ಸೇವಿಸಬೇಕು ಎಂದರು.

ಹಳ್ಳಿ ಮತ್ತು ಪಟ್ಟಣಗಳಲ್ಲಿ ಮಕ್ಕಳನ್ನು ಬೆಳೆಸುವ ವ್ಯತ್ಯಾಸದ ಕುರಿತು ಕಿರು ನಾಟಕ ಪ್ರದರ್ಶಿಸಲಾಯಿತು.

ನರ್ಸಿಂಗ್ ಕಾಲೇಜ್‌ನ ಸಹಾಯಕ ಉಪನ್ಯಾಸಕರಾದ ಪ್ರವೀಣ ನವಲಗುಂದ, ಮಹೇಶ್ವರಿ ಶಿರೋಳ, ಗುರು ಹಿರೇಮಠ, ಕಿಡ್ಜಿ ಶಾಲೆ ಸಿಬ್ಬಂದಿ ರಾಜೇಶ್ವರಿ ದೇಶಪಾಂಡೆ, ರೂಪಾ ನಾವಲಗಿ, ಮಧು ಹೊನ್ಯಾಳ, ಸೌಭಾಗ್ಯ ಸಾರಂಗಿ, ಉಮಾ ಸಮಗಂಡಿ, ಮಂಜುನಾಥ ಅಂಬಿಗೇರ ಹಾಗೂ ಮಕ್ಕಳ ತಾಯಂದಿರು ಇದ್ದರು.