ಜಿಲ್ಲೆ

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ

Dharwada - Santosh Vaidya

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಬಾಣಂತಿಯರಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಮಾತನಾಡಿ, ತಾಯಂದಿರು ಮೂಢ ನಂಬಿಕೆಗೆ ಒಳಗಾಗದೆ ನವಜಾತ ಶಿಶುಗಳಿಗೆ ನಿಗದಿತ ಅವಧಿಯವರೆಗೆ ಸ್ತನ್ಯಪಾನ ಮಾಡಿಸಬೇಕು. ಇದರಿಂದ ಮಾತ್ರ ಮಕ್ಕಳು ಆರೋಗ್ಯವಂತವಾಗಿ ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಸಿಲ್ಲಾ ಥಾಮಸ್, ಸ್ತನ್ಯಪಾನದ ಮಹತ್ವದ ಕುರಿತು ವಿವರಿಸಿದರು. ರೋಟರಿ ಕ್ಲಬ್ ಆಫ್ ಎಲೈಟ್​ನ ಅಧ್ಯಕ್ಷ ಅನೀಶ್ ಖೋಜೆ, ಶೋಭಾ ಜಿಗಳೂರ, ಪತ್ರಕರ್ತ ಗುರುರಾಜ ಹೂಗಾರ ಮತ್ತು ಅಮಿತ್ ಹಬೀಬ ಇದ್ದರು.