ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ನನಗೆ ತಿಳಿಸದೆ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕೆ ಪ್ರದೇಶಗಳಿಗೆ ನೀರು ಪೂರೈಕೆಗೆ ಆರಂಭಿಸಿದ್ದ ಪೈಪ್ಲೈನ್ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ. ಈ ವಿಷಯವನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಕೆಐಎಡಿಬಿ ಅವರು ಬೆಳಗಾವಿ ಜಿಲ್ಲಾಡಳಿತ ಅನುಮತಿ ಇಲ್ಲದೆ ಏಕಾಏಕಿ ಕಾಮಗಾರಿ ಕೈಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ನನಗೆ ಈ ಯೋಜನೆ ಕುರಿತು ಮಾಹಿತಿ ನೀಡಿಲ್ಲ. ಜಲಸಂಪನ್ಮೂಲ ಇಲಾಖೆಯವರು ಧಾರವಾಡದ ಕೈಗಾರಿಕಾ ಅಗತ್ಯಗಳನ್ನು ಪೂರೈಸಲು ಕೆಐಎಡಿಬಿಗೆ ನೀರು ಹಂಚಿಕೆ ಮಾಡಿರುವ ಬಗ್ಗೆ ನನಗೆ ತಿಳಿಸಿಲ್ಲ. ಆದ್ದರಿಂದ ಈ ವಿಷಯವನ್ನು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಮತ್ತು ಜನವಿರೋಧದ ಬಗ್ಗೆಯೂ ತಿಳಿಸುತ್ತೇನೆ ಎಂದರು.
ಧಾರವಾಡ ಜಿಲ್ಲೆಗೆ ಮಲಪ್ರಭಾ ಅಣೆಕಟ್ಟೆಯಿಂದ 6.5 ಟಿಎಂಸಿ ನೀರು ಬರುತ್ತಿದೆ ಮತ್ತು ನೀರನ್ನು ತೆಗೆದುಕೊಳ್ಳಲು ಮೂಲಸೌಕರ್ಯ ಲಭ್ಯವಿದೆ. ಆದರೆ ಹಿಡಕಲ್ ಅಣೆಕಟ್ಟೆಯಿಂದ ಧಾರವಾಡಕ್ಕೆ ಹೊಸ ಪೈಪ್ಲೈನ್ಗಳನ್ನು ಹಾಕಲಾಗುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೈಗಾರಿಕೆಗಳಿಗೆ ಹಂಚಿಕೆಯಾದ ನೀರನ್ನು ಧಾರವಾಡದಲ್ಲಿ ಮುಂಬರುವ ಸಕ್ಕರೆ ಕಾರ್ಖಾನೆಗೆ ಬಳಸಲಾಗುವುದಿಲ್ಲ ಮತ್ತು ಅವುಗಳನ್ನು ಉದ್ದೇಶಿತ ಉದ್ದೇಶಕ್ಕಾಗಿ ಮಾತ್ರ ಬಳಸುತ್ತೇವೆ ಎನ್ನುತ್ತಿದ್ದಾರೆ. ಈ ಯೋಜನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಬೆಳಗಾವಿಗೆ ಕರೆಯಿಸಿ ಸಭೆ ನಡೆಸುತ್ತೇನೆ. ಯಾರ ಅನುಮತಿ ಪಡೆದು ಕೆಲಸ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಬೇಕು. ಇದನ್ನು ಸಹ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕೋವಿಡ್&19 ಪ್ರಕರಣ 2ಕ್ಕೇರಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂದ ಅಧ್ಯರ ಬದಲಾವಣೆಯಲ್ಲಿ ತಮ್ಮ ಪಾತ್ರವಿಲ್ಲ. ನಿರ್ದೇಶಕರೇ ಅವಿಶ್ವಾಸ ರ್ನಿಣಯ ಮಂಡಿಸಿದರು. ಅದು ಅಂಗೀಕಾರವಾಯಿತು. ಇದು ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಂಭವಿಸಿದೆ. ಇದು ಜಾರಕಿಹೊಳಿ, ಕತ್ತಿ, ಜೊಲ್ಲೆ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಲ್ಲ. ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ