ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಲಿಂ. ಶತಾಯುಷಿ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ 42ನೇ ಪುಣ್ಯರಾಧನೆ ಹಾಗೂ ಪಂಚಭಾಷಾ ಪಂಡಿತರು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ 2008 ರ ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಯಾತ್ರಾ ಮಹೋತ್ಸವ ನಿಮಿತ್ತ ಯಲ್ಲಿ ಮೇ 21 ರಿಂದ 23 ರ ವರೆಗೆ ರೊಟ್ಟಿ ಜಾತ್ರೆ ನಡೆಯಲಿದೆ.
ಮನಗೂಳಿ ಪಟ್ಟಣದ 500ಕ್ಕೂ ಹೆಚ್ಚು ತಾಯಂದಿರು ತಮ್ಮ ಮನೆಗಳಲ್ಲಿ ತಯಾರಿಸಿದ ಸಾವಿರಾರು ರೊಟ್ಟಿಗಳನ್ನು ತಲೆ ಮೇಲೆ ಹೊತ್ತು ಪ್ರಮುಖ ಬೀದಿಗಳಲ್ಲಿ ಹಾಯ್ದು ಮಂಗಳವಾರ ಶ್ರೀಮಠಕ್ಕೆ ಆಗಮಿಸಿದರು. ಶ್ರೀಮಠದ ಅಭಿನವ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದಾಸೋಹದ ಜಯ ಘೋಷಣೆ ಮೊಳಗಿಸಲಾಯಿತು.
ಮೇ 9 ರಿಂದ 22 ರವರೆಗೆ ನಿತ್ಯ ಸಂಜೆ 7ಕ್ಕೆ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಪುರಾಣ ನಡೆಯುತ್ತಿದೆ. ಮೇ 21 ರಂದು ಮಹಿಳಾ ಗೋಷ್ಠಿ ನಡೆಯಲಿದೆ. ಮೇ 23 ರಂದು ಕುಂಭಮೇಳ, ಧರ್ಮಸಭೆ, ಮಹಿಳೆಯರಿಂದ ರಥೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ದ್ರಾಕ್ಷಾಯಿಣಿಯ ಆರುಟಿಗಿ, ಅಶ್ವಿನಿ ತಪಶೆಟ್ಟಿ, ವೀಣಾ ನುಚ್ಚಿ, ರೇಣುಕಾ ಬನಸೋಡೆ, ಕಸ್ತೂರಿ ಚಿಮ್ಮಲಗಿ, ಶಶಿಕಲಾ ಬೂದಿಹಾಳ, ಗೌರಕ್ಕ ಸಂಗಾಪುರ, ನಿಲವ್ವ ಕುಂಬಾರ, ಗುರುಲಿಂಗವ್ವ ಪಾಟೀಲ ಮತ್ತಿತರರು ಭಾಗವಹಿಸಿದ್ದರು.