ಸಿರವಾರ ತಹಸೀಲ್ ಕಚೇರಿಯಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಯಿತು. ಪಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸಿಪಿಐ ಶಶಿಕಾಂತ ಎಂ, ಉಪ ತಹಸೀಲ್ದಾರ್ ಸಿದ್ದನಗೌಡ ಇತರರಿದ್ದರು. 
ಜಿಲ್ಲೆ

ಶತ್ರುಗಳನ್ನು ಸದೆಬಡಿದ ಧೀರ ಮಹಿಳೆ

ಸಿರವಾರ: ಇಂದಿನ ಯುವ ಪೀಳಿಗೆಗೆ ಒನಕೆ ಓಬವ್ವ ಸ್ಫೂರ್ತಿಯಾಗಬೇಕಾಗಿದೆ ಎಂದು ತಹಸೀಲ್ದಾರ ರವಿ ಎಸ್. ಅಂಗಡಿ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಕೋಟೆಯ ರಕ್ಷಕನ ಪತ್ನಿಯಾಗಿದ್ದ ಇವರು ಕೋಟೆಯೊಳಗೆ ನುಗ್ಗುತ್ತಿದ್ದ ಶತ್ರುಗಳನ್ನು ಸದೆಬಡಿದ ಧೀರ ಮಹಿಳೆ. ಅದೇ ರೀತಿಯಾಗಿ ಇಂದಿನ ಮಹಿಳೆಯರು ಯಾವುದಕ್ಕೂ ಕುಗ್ಗದೆ, ಎಂತಹ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗಬೇಕು ಎಂದರು.

ಪಪಂ ಸದಸ್ಯರಾದ ಹಸೇನ್ ಅಲೀ ಸಾಬ್, ಕೃಷ್ಣ ನಾಯಕ, ಮೌಲಾಸಾಬ್ ವರ್ಚಸ್, ಹಾಜಿ ಚೌದ್ರಿ ಮುಖಂಡರಾದ ಹನುಮಂತ ಮರಾಠ, ರಾಮಣ್ಣ ಕವಿತಾಳ, ರಮೇಶ, ಗುಂಡಪ್ಪ, ವೆಂಕಟೇಶ ದೊರೆ, ರಮೇಶ ಭೋವಿ ಇತರರಿದ್ದರು.