ಇಂಡಿ: ಉಗ್ರಗಾಮಿಗಳ ನೆಲೆ ಧ್ವಂಸಗೊಳಿಸುವ ಮೂಲಕ ಭಾರತೀಯ ವೀರ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಡೀ ಜಗತ್ತಿನಲ್ಲಿಯೇ ಹಿಂದು ರಾಷ್ಟ್ರ ಇರುವುದು ಭಾರತ ಮಾತ್ರ. ಇಲ್ಲಿಯೂ ಹಿಂದುಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಬುದ್ಧ್ಧಿ ಕಲಿಸಿದ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದೆಲ್ಲೆಡೆ ದೇಶಾಭಿಮಾನಿಗಳು ತಿರಂಗಾ ಯಾತ್ರೆ ನಡೆಸುತ್ತಿದ್ದಾರೆ. ಆಪರೇಷನ್ ಸಿಂಧೂರ ಉಗ್ರಗಾಮಿಗಳು ನಿರ್ಣಾಮವಾಗುವವರೆಗೂ ನಿಲ್ಲಲ್ಲ. ಉಗ್ರರ ವಿರುದ್ಧ ನಿಂತಿಲ್ಲ, ಮತ್ತೆ ಭಯೋತ್ಪಾದಕ ಚಟುವಟಿಕೆ ಪ್ರಾರಂಭಿಸಿದರೆ ಮತ್ತೆ ಯುದ್ಧ ಮುಂದುವರಿಸಲಾಗುತ್ತದೆ ಎಂದರು.
ಕಾಸುಗೌಡ ಬಿರಾದಾರ ಮಾತನಾಡಿ, ಸೈನಿಕರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಗಡಿಯಲ್ಲಿ ದೇಶ ಕಾಯುತ್ತ ನಮ್ಮ ರಕ್ಷಣೆ ಮಾಡುತ್ತಿರುವ ಸೈನಿಕರ ಕುಟುಂಬದವರ ರಕ್ಷಣೆ ನಮ್ಮ ಕರ್ತವ್ಯವಾಗಬೇಕು ಎಂದರು.
ಶಿವಾನಂದ ಶಿವಾಚಾರ್ಯರು ಮಾತನಾಡಿ, ಸ್ವಾಮೀಜಿಗಳಿಗೂ ಯುದ್ಧ ಮಾಡಲು ಕರೆದರೆ ನಾವು ಸಿದ್ಧರಿದ್ದೇವೆ ಎಂದರು.
ತಡವಲಗಾದ ರಾಚೋಟೇಶ್ವರ ಶ್ರೀಗಳು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರರು, ಜೆಡಿಎಸ್ ಧುರೀಣ ಬಿ.ಡಿ. ಪಾಟೀಲ, ಸೈನಿಕರ ಸಂಘದ ಅಧ್ಯಕ್ಷ ರಾಮಣ್ಣ, ಎಸ್.ಎಂ. ಬಿರಾದಾರ, ಸಿದ್ಧಲಿಂಗ ಹಂಜಗಿ, ಮಲ್ಲಿಕಾರ್ಜುನ ಕಿವುಡೆ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಅಗರಖೇಡದ ಪ್ರಭುಲಿಂಗ ಶಿವಾಚಾರ್ಯರು, ಎ.ಎಸ್. ಗಾಣಿಗೇರ, ಅಜೀತ ಧನಶೆಟ್ಟಿ, ಗುರು ಜೋಶಿ, ರಮೇಶ ಕುಲಕರ್ಣಿ, ಸೋಮು ನಿಂಬರಗಿಮಠ, ಎಸ್.ಜೆ. ವಾಲಿಕಾರ, ಮಾಜಿ ಸೈನಿಕರಾದ ಬಸವರಾಜ ಬಂಕೂರ, ಎಂ.ಪಿ. ಬಿರಾದಾರ, ಎಸ್.ಬಿ. ಹಿರೇಮಾಳ, ಶ್ರೀಕಾಂತ ದೇವರ, ಚೆನ್ನುಗೌಡ ಪಾಟೀಲ, ಹಣಮಂತಗೌಡ ಪಾಟೀಲ, ಶೀಲವಂತ ಉಮರಾಣಿ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ಅನೀಲ ಜಮಾದಾರ, ಅನೀಲ ಪ್ರಸಾದ ಏಳಗಿ, ಎಸ್.ಟಿ. ಪಾಟೀಲ, ಸಿದ್ದು ಡಂಗಾ, ಶ್ರೀಶೈಲಗೌಡ ಬಿರಾದಾರ, ಅನುಸೂಯಾ ಮದರಿ, ಬೋರಮ್ಮ ನಾವಿ, ಸುನಂದಾ ಗಿರಣಿವಡ್ಡರ ಹಾಗೂ ದೇಶಾಭಿಮಾನಿಗಳು ಪಾಲ್ಗೊಂಡಿದ್ದರು.
50 ಅಡಿ ಉದ್ದದ ತ್ರಿವರ್ಣ ಧ್ವಜದ ತಿರಂಗಾ ಯಾತ್ರೆ ಶಿವಾಜಿ ವೃತ್ತದಿಂದ ಆರಂಭಗೊಂಡು ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ನಡೆಯಿತು.