ಜಿಲ್ಲೆ

ಬ್ರೈನ್‌ಸ್ಟ್ರೋಕ್‌ಗೆ ಜಿಮ್ ತರಬೇತುದಾರ ಬಲಿ

reportermys

ಮಂಡ್ಯ: ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಗೋಲ್ಡ್‌ಜಿಮ್ ಮಾಲೀಕ, ತರಬೇತುದಾರ ಮಧು(32) ಬ್ರೈನ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿದ್ದಾರೆ.
ನಾಲ್ಕು ದಿನಗಳ ಹಿಂದೆ ಬ್ರೈನ್‌ಸ್ಟ್ರೋಕ್‌ಗೆ ಒಳಗಾಗಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಸ್ವತಃ ಜಿಮ್ ಕಲಿತಿದ್ದ ಮಧು, ಯುವಕರಿಗೆ ಜಿಮ್ ತರಬೇತಿ ನೀಡುತ್ತಿದ್ದರು.