ಯಲ್ಲಾಪುರ: ಯಜ್ಞೋಪವೀತ ಧರಿಸಿ ನಡೆಸಿದ ಅನುಷ್ಠಾನ ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತದೆ ಎಂದು ವಿದ್ವಾನ್ ವಿ.ಟಿ. ಭಟ್ಟ ಹೇಳಿದರು.
ಪಟ್ಟಣದ ನಾಯಕನಕೆರೆ ಶಾರದಾಂಬಾ ಸಂಸ್ಕೃತ ಪಾಠಶಾಲೆಯಲ್ಲಿ ಆಯೋಜಿಸಿದ್ದ ವಸಂತ ವೇದ ಸಂಸ್ಕೃತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ರಾಹ್ಮಣರು ಋಷಿ ಪರಂಪರೆಗೆ ಸೇರಿದವರು. ಸಂಧ್ಯಾವಂದನೆ, ಅನುಷ್ಠಾನದ ಮೂಲಕ ಬ್ರಾಹ್ಮಣ್ಯ ಕಾಪಾಡಿಕೊಳ್ಳದೇ ಹೋದರೆ ಬ್ರಾಹ್ಮಣ್ಯಕ್ಕೆ ಬೆಲೆ ಇರುವುದಿಲ್ಲ ಎಂದರು.
ಪಾಠಶಾಲೆಯ ಅಧ್ಯಕ್ಷ ಉಮೇಶ ಭಾಗ್ವತ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ಹೆಗಡೆ, ಎಸ್.ಎನ್. ಭಟ್ಟ ಏಕಾನ, ನರಸಿಂಹ ಗೇರಗದ್ದೆ, ಟಿ.ವಿ. ಕೋಮಾರ ಮಾತನಾಡಿದರು.
ಶಿಬಿರದ ಮೊದಲ ವರ್ಷದ ವಿದ್ಯಾರ್ಥಿಗಳು ದುರ್ಗಾ ಸೂಕ್ತ, ದ್ವಿತೀಯ ವರ್ಷದ ವಿದ್ಯಾರ್ಥಿಗಳು ಶ್ರದ್ಧಾ ಸೂಕ್ತ, ಮೂರನೇ ವರ್ಷದ ವಿದ್ಯಾರ್ಥಿಗಳು ರುದ್ರ ಪಠಿಸಿದರು. ಶಿಬಿರದ ಶಿಕ್ಷಕರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.