ಮಸ್ಕಿಯಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ಪ್ರಥಮ ಸಮಾವೇಶದಲ್ಲಿ ಹಿರಿಯರಾದ ಕಿಶನ್ ನಾಯಕ್, ಹನುಮಂತರಾವ್ ಕುಲಕರ್ಣಿ, ರಾಘವೇಂದ್ರರಾವ್ ಆನಾಹೊಸೂರು ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರಸನ್ನ ಪಾಟೀಲ್, ಮುರಳೀಧರ ಕುಲಕರ್ಣಿ, ಡಾ.ಆನಂದ ಫಡ್ನವೀಸ್, ಹನುಮಂತರಾವ್ ಕುಲಕರ್ಣಿ ಬಳಗಾನೂರು ಇತರರಿದ್ದರು. 
ಜಿಲ್ಲೆ

ಬ್ರಾಹ್ಮಣ ಸಮಾಜಕ್ಕಿದೆ ಸಂಸ್ಕಾರದ ಬಲ

Kopala - Desk - Eraveni

ಮಸ್ಕಿ: ಸಮಾಜದಲ್ಲಿ ಬ್ರಾಹ್ಮಣರನ್ನು ಬುದ್ಧಿವಂತರು ಎಂದು ಗುರುತಿಸುತ್ತಾರೆ. ಇದು ಹಿರಿಯರ ಬಳುವಳಿಯಾಗಿದ್ದು, ಉಳಿಸಿಕೊಳ್ಳಲು ವೈಯಕ್ತಿಕ ಧರ್ಮ ಜತೆಗೆ ಸಾಮಾಜಿಕ ಧರ್ಮ ಪಾಲಿಸಬೇಕು ಎಂದು ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.

ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಬ್ರಾಹ್ಮಣರ ಪ್ರಥಮ ಸಮಾವೇಶದಲ್ಲಿ ಮಾತನಾಡಿದರು. ಬ್ರಾಹ್ಮಣರಿಗೆ ಸಂಸ್ಕಾರದ ಬಲವಿದ್ದು, ಧರ್ಮದ ತಳಹದಿಯಲ್ಲಿ ಆಧುನಿಕ ಶಿಕ್ಷಣವನ್ನು ಯುವಕರಿಗೆ ನೀಡಬೇಕಾಗಿದೆ.

ರಾಮಾಯಣ, ಮಹಾಭಾರತವನ್ನು ಬ್ರಾಹ್ಮಣರು ರಚಿಸಿಲ್ಲ. ಆದರೆ, ಗ್ರಂಥಗಳಲ್ಲಿರುವ ಶ್ಲೋಕ ಮತ್ತು ಅರ್ಥಗಳನ್ನು ಬ್ರಾಹ್ಮಣರು ಸದಾ ನೆನಪಿನಲ್ಲಿಟ್ಟುಕೊಂಡು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದರಿಂದ ಜ್ಞಾನಿಗಳು ಎಂದು ಕರೆಯುತ್ತಾರೆ. ಜ್ಞಾನ ಸಂಪತ್ತು ಪ್ರತಿಯೊಬ್ಬರನ್ನೂ ಬೆಳೆಸುತ್ತದೆ ಎಂದರು.

ಶಾಸಕ ಆರ್.ಬಸನಗೌಡ ತುರ್ವಿಹಾಳ, ಬ್ರಹ್ಮಾಣ ಸಮಾಜದ ಜಿಲ್ಲಾ ಅಧ್ಯಕ್ಷ ಮುರಳೀಧರ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಡಾ.ಆನಂದ ಫಡ್ನವೀಸ್, ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ಹನುಮಂತರಾವ್ ಕುಲಕರ್ಣಿ ಬಳಗಾನೂರು, ಸಾಹಿತಿ ಗುಂಡೂರಾವ್ ದೇಸಾಯಿ, ವೆಂಕಟೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತರಾವ್ ಕುಲಕರ್ಣಿ, ಪ್ರಮುಖರಾದ ಪ್ರಸನ್ನ ಪಾಟೀಲ್, ಕಿಶನ್ ನಾಯಕ್, ಹನುಮಂತರಾವ್ ಕುಲಕರ್ಣಿ ವೆಂಕಟಾಪುರ, ರಾಘವೇಂದ್ರರಾವ್ ಆನಾಹೊಸೂರು ಇತರರಿದ್ದರು.