ಮುಖ್ಯಶಿಕ್ಷಕರಾಗಿ ನಿವೃತ್ತಿಯಾದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ನ ಬೆಳ್ವೆ ವಲಯಾಧ್ಯಕ್ಷ ಎಂ.ಸತ್ಯನಾರಾಯಣ ಹೆಬ್ಬಾರ್ ದಂಪತಿಯನ್ನು ಸನ್ಮಾನಿಸಲಾಯಿತು 
ಜಿಲ್ಲೆ

ನಿವೃತ್ತ ಮುಖ್ಯಶಿಕ್ಷಕಗೆ ಬ್ರಾಹ್ಮಣ ಪರಿಷತ್ ಸನ್ಮಾನ

ಇಂದಿರಾ ಎನ್ ಕೆ

ಬೆಳ್ವೆ: ಬೆಳ್ವೆ ಸಮೀಪದ ತಾರಿಕಟ್ಟೆ ಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ನಿವೃತ್ತಿಗೊಂಡ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯಾಧ್ಯಕ್ಷ ಎಂ.ಸತ್ಯನಾರಾಯಣ ಹೆಬ್ಬಾರ್ ಮರೂರು ಹಾಗೂ ಪತ್ನಿ ಗಂಗಾ ದಂಪತಿಯನ್ನು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಮತ್ತು ಶ್ರೀ ಶಂಕರನಾರಾಯಣ ವಿಪ್ರ ಸಭಾ ಟ್ರಸ್ಟ್ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ಗೌರವಾಧ್ಯಕ್ಷ ಬಿ.ಎಸ್.ಅನಂತಪದ್ಮನಾಭ ಬಾಯರಿ, ಕಾರ್ಯದರ್ಶಿ ರತ್ನಾಕರ ಉಡುಪ, ಮಹಿಳಾಧ್ಯಕ್ಷೆ ಸಂಧ್ಯಾ ಉಡುಪ, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಎಸ್.ಬಾಲಕೃಷ್ಣ ಅಲ್ಸೆ ಸೆಟ್ಟೋಳಿ, ಬೆಳ್ವೆ ಶ್ರೀಶಂಕರನಾರಾಯಣ ದೇವಳ ಪ್ರಧಾನ ಅರ್ಚಕ ಶಂಕರನಾರಾಯಣ ಐತಾಳ ಬೆಳ್ವೆ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ನ ಬೆಳ್ವೆ ವಲಯ ಗೌರವಾಧ್ಯಕ್ಷ ರಾಧಾಕೃಷ್ಣ ಮಯ್ಯ ಹೊನ್ಕಲ್, ಮಹಿಳಾಧ್ಯಕ್ಷೆ ಭಾರ್ಗವಿ ಪಿ. ಭಟ್, ಯುವಾಧ್ಯಕ್ಷ ವಾಸುದೇವ ಬಾಯರಿ ಅರಸಮ್ಮಕಾನು, ಪ್ರೊ.ಪವನ್ ಕಿರಣ್‌ಕೆರೆ ಉಡುಪಿ, ತಂತ್ರಿ ಶ್ರೀನಿವಾಸ ಬಾಯರಿ ಬೆಪ್ಡೆ, ಶ್ರೀನಿವಾಸ ಬಾಯರಿ ಮರೂರು, ವಿಪ್ರ ಬಂಧುಗಳು ಉಪಸ್ಥಿತರಿದ್ದರು.