ಜಿಲ್ಲೆ

ಬ್ರಾಹ್ಮಣ ಮಹಾಸಭಾ ಧಾರವಾಡ ಸಮಿತಿ ಪುನಾರಚನೆ

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಧಾರವಾಡ ಜಿಲ್ಲಾ ಮಟ್ಟದ ನೂತನ ಸಮಿತಿಯನ್ನು ಮಹಾಸಭಾಧ್ಯಕ್ಷ ಅಶೋಕ ಹಾರನಹಳ್ಳಿ ಘೊಷಿಸಿದ್ದಾರೆ.

ಧಾರವಾಡ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಹುಬ್ಬಳ್ಳಿಯ ಬಿಂದುಮಾಧವ ಪುರೋಹಿತ ಆಯ್ಕೆಯಾಗಿದ್ದು, ಜಿಲ್ಲಾ ಸಂಚಾಲಕರಾಗಿ ಧಾರವಾಡದ ರಾಜು ಪಾಟೀಲಕುಲಕರ್ಣಿ, ಸುರೇಶ ಕುಲಕರ್ಣಿ, ಡಾ. ಭಾಸ್ಕರ ಪಾಟೀಲ, ಶಂಕರ ಪಾಟೀಲ, ಅನಂತ ಪದ್ಮನಾಭ ಐತಾಳ, ಸುನೀಲ ಗುಮಾಸ್ತೆ, ಕಿರಣ ಪಾಟೀಲ, ಅಶೋಕ ಪಾಳಂದೆ, ಪ್ರಮೋದ ದೇಶಪಾಂಡೆ, ನರೇಂದ್ರ ಕುಲಕರ್ಣಿ ಅವರನ್ನು ನೇಮಿಸಲಾಗಿದೆ. ಮನೋಹರ ಪರ್ವತಿ ಅವರನ್ನು ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ.

ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಎ. ಸಿ. ಗೋಪಾಲ ಮತ್ತು ಹನುಮಂತ ಡಂಬಳ ಅವರ ಕೋರಿಕೆಯ ಮೇರೆಗೆ ಸಮಿತಿ ಪುನಾರಚನೆ ಮಾಡಲಾಗಿದೆ ಎಂದು ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.